ಮೈಸೂರು : ಎರಡು ಬೈಕ್ ಗಳ ನಡುವೆ ಅಪಘಾತವಾಗಿ
ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ
ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಬಳಿ ನಡೆದಿದೆ.ಕುರುಬೂರು ಗ್ರಾಮದ ನಾಗರಾಜು (80)ಮೃತ ದುರ್ದೈವಿ.
ಘಟನೆ ಖಂಡಿಸಿ ಗ್ರಾಮಸ್ಥರು.ಮೈಸೂರು ಚಾಮರಾಜನಗರ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ನಡು ರಸ್ತೆಯಲ್ಲೇ ಶವ ಇತ್ತು ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು.
ಈ ಹಿಂದೆ ಅದೇ ಜಾಗದಲ್ಲಿ ಕಾರ್ ಮತ್ತು ಬಸ್ ನಡುವೆ ಅಪಘಾತಗೊಂಡು 10ಜನ ಸಾವನ್ನಪ್ಪಿದ್ರು.
ಕುರುಬೂರು ಗ್ರಾಮದ ಬಳಿ ಸಾಕಷ್ಟು ಅಪಘಾತವಾಗುತ್ತಿದೆ.ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.ಚಾಮರಾಜನಗರ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ