ಮೈಸೂರು : ವೀಲ್ಲಿಂಗ್ ಮಾಡುತ್ತಾ ಪುಂಡಾಟ ನಡೆಸುತ್ತಿದ್ದ ಪಿಎಸ್ಐ ಪುತ್ರನನ್ನು ನಗರದ ಸಿದ್ದಾರ್ಥ ಸಂಚಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬೈಕ್ ಸೀಜ್ ಮಾಡಿ ಪಿಎಸ್ಐ ಪುತ್ರನ ವಶಕ್ಕೆ ಪಡೆದಿದ್ದಾರೆ.
ಸೈಯ್ಯಾದ್ ಐಮಾನ್ ವೀಲ್ಲಿಂಗ್ ಮಾಡಿ ಪುಡಾಂಟ ನಡೆಸುತ್ತಿದ್ದ ಪಿಎಸ್ಐ ಪುತ್ರ.ನಗರದ ರಿಂಗ್ ರಸ್ತೆ ಹಾಗೂ ರಾಜೀವ್ ನಗರದಲ್ಲಿ ವೀಲ್ಲಿಂಗ್ ಮಾಡುತ್ತಿದ್ದ ಸೈಯ್ಯಾದ್ ಐಮಾನ್.ವೀಲ್ಲಿಂಗ್ ಮಾಡಿದ ವಿಡಿಯೋಗಳನ್ನ ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್.
ವೀಲ್ಲಿಂಗ್ ವಿಡಿಯೋ ಆಧಾರಿಸಿ ಸಿದ್ಧಾರ್ಥ ಸಂಚಾರಿ ಪೊಲೀಸರಿಂದ ಕಾರ್ಯಾಚರಣೆ.ಬೈಕ್ ಹಾಗೂ ಸೈಯ್ಯಾದ್ ವಶಕ್ಕೆ ಪಡೆದು ಪ್ರಕರಣ ದಾಖಲು.
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.