ಚಾಮರಾಜನಗರ : ದಸರಾ ಜಂಬೂಸವಾರಿಯಿಂದ ಈ ಬಾರಿ ಚೈತ್ರ ದೂರಶಾಂತ ಸ್ವಾಭಾವದ ಕುಮ್ಕಿ ಆನೆ ಚೈತ್ರ ಈ ಬಾರಿ ದಸರಾ ಮಹೋತ್ಸವಕ್ಕೆ ಗೈರು.
ಬಂಡಿಪುರ ರಾಂಪುರ ಆನೆ ಶಿಬಿರದಲ್ಲಿರುವ ಚೈತ್ರ ಆನೆ.
ಗರ್ಭಣಿಯಾದ ಕಾರಣ ಈ ಬಾರಿ ಜಂಬೂಸವಾರಿಗೆ ಪಾಲ್ಗೊಳ್ಳದ ಚೈತ್ರ.
ಸುಮಾರು 51 ವರ್ಷದ ಕುಮ್ಕಿ ಆನೆ ಚೈತ್ರ.
14 ನೇ ಮರಿಗೆ ಜನ್ಮ ನೀಡುವ ಮೂಲಕ ‘ಸೂಪರ್ ಅಮ್ಮ’ ಎಂದು ಕರೆಸಿಕೊಳ್ಳಲಿರುವ ಚೈತ್ರ ಎಂಬ ಆನೆ.
ಕಳೆದ ಬಾರಿ ದಸರಾ ಮಹೋತ್ಸವಕ್ಕೆ ಭಾಗವಹಿಸಿದ್ದ ಲಕ್ಷ್ಮಿ ಆನೆ ಅರಮನೆಯಲ್ಲೇ ಗಂಡು ಮರಿಗೆ ಜನ್ಮ ನೀಡಿತ್ತು.
ಅರಮನೆಯಲ್ಲೇ 15 ದಿನಗಳ ಕಾಲ ಹಾರೈಕೆ ಮಾಡಿ ದತ್ತಾತ್ರೇಯ ಎಂಬ ಹೆಸರಿಟ್ಟು ಕಳಸಿಕೊಡಲಾಗಿತ್ತು.
ಗರ್ಭಿಣಿ ಆನೆಗಳ ಬಳಕೆಗೆ ಕಳೆದ ಬಾರಿ ಸಾರ್ವಜನಿಕ ಆಕ್ಷೇಪ ಹಿನ್ನೆಲೆ.ಈ ಬಾರಿ ಗರ್ಭ ಧರಿಸಿದ ಆನೆಗಳಿಗೆ ನಿರ್ಬಂಧ.ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿದ ಬಳಿಕ ದಸರಾ ಮಹೋತ್ಸವಕ್ಕೆ ಅವಕಾಶ ಮಾಡಿಕೊಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ.
ರಾಂಪುರದ ಹಿರಿಯಮ್ಮ ಈ ಬಾರಿ ಮೈಸೂರು ದಸರಾ ಮಹೋತ್ಸವಕ್ಕೆ ಗೈರು.
ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ರಾಂಪುರ ಆನೆ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚೈತ್ರ.