ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬರಲು 20-30 ಜನ ಶಾಸಕರು ರೆಡಿಯಾಗಿದ್ದಾರೆ ಇದನ್ನ ಕಂಟ್ರೋಲ್ ಮಾಡಲು ಕಾಂಗ್ರೆಸ್ ಅವರು ಘರ್ ವಾಪಸಿ ಅಂತ ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್‍ನಿಂದ ಅಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ತಿಳುವಳಿಕೆಯಲ್ಲಿ ನಮ್ಮ ಪಕ್ಷದ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಈ ವಿಷಯವನ್ನ ಬಿಟ್ಟಿದ್ದಾರೆ. ಕಾಂಗ್ರೆಸ್‍ನಲ್ಲೆ 20-30 ಜನ ಶಾಸಕರು ಪಕ್ಷ ಬಿಡುವ ಸ್ಥಿತಿಯಲ್ಲಿ ಇದ್ದಾರೆ. ಇಂತಹ ವಾತಾವರಣವನ್ನ ಕಾಂಗ್ರೆಸ್ ಎರಡು ತಿಂಗಳಲ್ಲಿ ಸೃಷ್ಟಿ ಮಾಡಿಕೊಂಡಿದ್ದಾರೆ. 30 ಜನ ಶಾಸಕರು ಪಕ್ಷ ಬಿಟ್ಟು ಹೋಗೋದನ್ನ ಮುಚ್ಚಿಕೊಳ್ಳೋದಕ್ಕಾಗಿ ಬಿಜೆಪಿ, ಜೆಡಿಎಸ್ ನಿಂದ 20 ಜನ, 10 ಜನ ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳ್ತಿದ್ದಾರೆ ಎಂದರು. ಕಾಂಗ್ರೆಸ್ ನಿಂದ ಹೊರಗೆ ಬರೋಕೆ ರೆಡಿ ಇರೋ ಶಾಸಕರನ್ನ ಕಂಟ್ರೋಲ್ ಮಾಡೋಕೆ ಘರ್ ವಾಪಸಿ ಅಂತಿದ್ದಾರೆ ಅಂತ ಕಿಡಿಕಾರಿದರು
ಕಾಂಗ್ರೆಸ್‍ನಲ್ಲಿ ಸೋಮವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಹಲವರನ್ನ ಪಕ್ಷಕ್ಕೆ ವಾಪಸ್ ಕರೆಸಿಕೊಂಡಿದ್ದಾರೆ. ಶಾಸಕರು ಬಿಜೆಪಿಯಲ್ಲಿ ಇರುತ್ತೇನೆ ಅಂತ ಹೇಳ್ತಿದ್ದಾರೆ 3 ವರ್ಷ ಸಚಿವರಾಗಿ ಬಿಜೆಪಿ ಅವರು ಸೋಮಶೇಖರ್ ಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದರು. ಬಿಜೆಪಿ ನಾಯಕರು ಇವರು ಕೇಳಿದ್ದಕ್ಕೆ ಸಹಿ ಹಾಕುತ್ತಿದ್ದರು. ಮೈಸೂರು ಉಸ್ತುವಾರಿ ಕೊಟ್ಟಿದ್ರು. ಮಂತ್ರಿಯಾಗಿದ್ದಾಗ ನೀವು ಕೇಳಿದ್ದಕ್ಕೆ ಸಹಿ ಹಾಕುತ್ತಿದ್ದರು. ಮೈತ್ರಿ ಸರ್ಕಾರಕ್ಕೆ ಅಭಿವೃದ್ಧಿ ಆಗ್ತಿಲ್ಲ ಅಂತ ಹೋಗಿದ್ದು ಅಲ್ಲವಾ? 3 ವರ್ಷದಲ್ಲಿ ಮಂತ್ರಿಯಾಗಿ ಯಶವಂತಪುರದ ಅಭಿವೃದ್ಧಿಗೆ ಕೆಲಸ ಮಾಡಿಲ್ಲ ಅಂತ ಕಿಡಿಕಾರಿದರು.