ಮೈಸೂರು : ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಕೃಷಿ ಇಲಾಖೆ ಇಬ್ಬರು ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ.
ಸಿಐಡಿ ಅಧಿಕಾರಿಗಳಿಂದ ನಿನ್ನೆ ರಾತ್ರಿ ಅರೆಸ್ಟ್.
ಮೈಸೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು.ಜಿಲ್ಲಾಮಟ್ಟದ ಅಧಿಕಾರಿಗೂ ಬಂಧನ ಭೀತಿ ಎದುರಾಗಿದೆ. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಪತ್ರ.ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು.
ಮೈಸೂರಿನ ಸರಸ್ವತಿಪುರಂ ಪೋಸ್ಟ್ ಆಫೀಸ್ನಿಂದ ಸ್ಪೀಡ್ ಪೋಸ್ಟ್ ಆಗಿತ್ತು.ಈ ಸಂಬಂಧ ಸಿಐಡಿ ಅಧಿಕಾರಿಗಳು ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.
ಅಂದು ರಾತ್ರಿಯೇ ಇಬ್ಬರು ಅಧಿಕಾರಿಗಳ ಅರೆಸ್ಟ್ ಆಗಿತ್ತು.
ಇದೀಗ ಮತ್ತಿಬ್ಬರು ಅಧಿಕಾರಿಗಳ ಬಂಧನವಾಗಿದೆ.