ಮೈಸೂರು : ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ವಿಚಾರಕ್ಕೆ ನಗರದಲ್ಲಿಂದು ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ಅಧಿಕಾರ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ.ಬಿಜೆಪಿ ಅಧಿಕಾರ ಇದ್ದಾಗ ಕೆ.ಆರ್.ಎಸ್ ಭರ್ತಿಯಾಗದ ಸ್ಥಿತಿ ಇರಲಿಲ್ಲ.
ಈಗ ರೈತರಿಗೆ ನೀರಿಲ್ಲ, ಜಲಾಶಯ ಖಾಲಿಯಾಗಿದೆ.
ಪವರ್ ಕಟ್, ಲೋಡ್ ಶೆಡಿಂಗ್ ಶುರುವಾಗಿದೆ.
ಶೂನ್ಯ ಬಿಲ್ ಅಂತರೆ, ಕರೆಂಟೇ ಇಲ್ಲದ ಮೇಲೆ ಶೂನ್ಯ ಬಿಲ್ ಬರುತ್ತೆ.ಇಂತಹ ದುರ್ದೆಸೆ ಇರುವ ಸಂಧರ್ಭದಲ್ಲಿ ಕಾಂಗ್ರೆಸ್ ಹೋಗ್ತಾರ ಎಂದು ನಂಬಲ್ಲ.ಹೋಗೋರನ್ನ ರಾಜಕೀಯ ಜಾಣ್ಮೆ ಇರೋರು,ಬುದ್ದಿವಂತರು ಎಂದು ಹೇಳಲ್ಲ ಎಂದರು.
ಅಲ್ಲದೆ ಹೋಗುವವರಿಗೆ ದೂರಾಲೋಚನೆ ಇದೆ ಎಂದು ಹೇಳಲಾಗಲ್ಲ.ಸರ್ಕಾರ ಬಂದಾಗಿನಿಂದ ಅಲ್ಲಿನ ಹಿರಿಯ ಶಾಸಕರಿಗೆ ಸಮಾಧಾನ ಇಲ್ಲ.ಇಲ್ಲಿಂದ ಹೋದವರಿಗೆ ಏನ್ ಸಮಾಧನಾನ ಸಿಗುತ್ತೆ.ಇದರಿಂದ ಹೀಗುವ ಸಾಧ್ಯತೆ ಇಲ್ಲ ಎಂದು ನಂಬುತ್ತೇನೆ.ಸೋಮಶೇಖರ್ ಅವರ ಜೊತೆ ಮಾತನಾಡುತ್ತೇನೆ.ಅವರ ಭಾವನೆ ಏನಿದೆ ಎಂದು ತಿಳಿದುಕೊಂಡು ಉಳಿದವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಚುನಾವಣೆ ಮುಗಿದು 3 ತಿಂಗಳಾಗಿದೆ.
ನಾವು ಸೋತಿರುವವರೆ ಇನ್ನೊಬ್ಬರ ಕಡೆ ಬೊಟ್ಟು ಮಾಡುತ್ತಿಲ್ಲ.ನಾವು ಸೋತಿರೋದಕ್ಕೆ ತಪ್ಪು ನಮ್ಮದು ಅಂತ ಹೇಳ್ತಿದ್ದೇವೆ.ಸೋಮಶೇಖರ್ ಜೊತೆ ಪೋನ್ ನಲ್ಲಿ ಮಾತಮಾಡಿದ್ದೇನೆ.ಕೂತ ಮಾತನಾಡಿದ ನಂತರ ಎಲ್ಲವು ಬಗೆಹರಿಯುತ್ತೆ ಎಂದು ಹೇಳಿದರು
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು,
28 ಸ್ಥಾನ ಗೆಲ್ಲಲ್ಲು ಅಗತ್ಯ ಇರುವ ಎಲ್ಲಾ ಯೋಚನೆ ಮಾಡುತ್ತೇನೆ.ನಾವು 28 ಸ್ಥಾನ ಗೆಲ್ಲಬೇಕು.
ಅದರ ಬಗ್ಗೆ ಯೋಚನೆ ಮಾಡುತ್ತೇವೆ.
ದೇಶದ ಹಿತದೃಷ್ಟಿಯಿಂದ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು.ಮುಂದಿನ ಅವಧಿಗೆ ವಿಶ್ವದ ಮೂರನೇ ಶಕ್ತಿಯಾಗಿ ಬೆಳೆಯಬೇಕು ಎಂಬುದು ಮೋದಿಯವರ ಆಶಯ.ಈ ಕಾರಣದಿಂದ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದು ಸಿಟಿ ರವಿ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾವುಕಾಂಗ್ರೆಸ್ ನವರನ್ನು ನಿರ್ಲಕ್ಷ್ಯ ಮಾಡಲ್ಲ.ಅವರನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಅಧಿಕಾರ ಕಳೆದುಕೊಂಡೆವು.ಅವರ ಗ್ಯಾರಂಟಿ ಚರ್ಚೆಗೆ ಕೌಂಟರ್ ಮಾಡಲಿಲ್ಲ.ಪೇ ಸಿಎಂ ಹೇಳಿದ್ದಾಗ ಕ್ರಮ ತೆಗೆದುಕೊಳ್ಳಲಿಲ್ಲ.ಇದರ ಪರಿಣಾಮ
ಅನುಭವಿಸುತ್ತಿದ್ದೇವೆ.ಇದರಿಂದ ಡಿಕೆಶಿ ಆಗಲಿ ಕಾಂಗ್ರೆಸ್ ಚಿಂತನೆಯನ್ನ ನಿರ್ಲಕ್ಷ್ಯ ಮಾಡಲ್ಲ.ನಾವು ಜನರ ಮುಂದೆ ಹೋಗುತ್ತೇವೆ.ನಮ್ಮ ತಪ್ಪು ತಿದ್ದುಕೊಂಡು ಮುಂದೆ ಹೋಗುತ್ತೇವೆ ಎಂದರು.