ಮೈಸೂರು : ಗೃಹಿಣಿ ಅನುಮಾನಸ್ಪದವ ಸಾವಿಗೀಡಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.ಮೈಸೂರಿನ ದರ್ಶಿನಿ 21 ವರ್ಷ ಮೃತ ದುರ್ದೈವಿ.
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತಿ ಹೇಳಿದ್ದಾರೆ ಕೆಆರ್.ಆಸ್ಪತ್ರೆಗೆ ಪತ್ನಿ ತಂದು ಸೇರಿಸಿ ಎಂದು ಮನೆಯವರಿಗೆ ಪತಿ ತಿಳಿಸಿದ್ದರು. ಅಷ್ಟರಲ್ಲಿ ದರ್ಶಿನಿ ಸಾವನ್ನಪ್ಪಿದ್ದರೆ. ಗಂಡ ಸೂರ್ಯನೇ ಕೊಲೆ ಮಾಡಿರುವುದಾಗಿ ದರ್ಶಿನಿ ಕುಟುಂಬಸ್ಥರ ಆರೋಪ ಮಾಡಿದ್ದಾರೆ.
ಒಂದುವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯ ಎಂಬುವರ ಜೊತೆ ವಿವಾಹವಾಗಿತ್ತು.ಪ್ರೀತಿಸಿ ಮದುವೆಯಾಗಿದ್ದ ದರ್ಶಿನಿ ಮತ್ತು ಸೂರ್ಯ.
ಮನೆಯವರ ವಿರೋಧದ ನಡುವೆಯೂ ದರ್ಶಿನಿ ಮದುವೆಯಾಗಿದ್ದ ಸೂರ್ಯ.ಮದುವೆಯಾದ 4 ತಿಂಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಸೂರ್ಯ.
ನನ್ನ ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ.
ವರದಕ್ಷಿಣೆ ತರುವಂತೆ ಮಗಳನ್ನ ಹಿಂಸಿಸುತ್ತಿದ್ದ.
ನನ್ನ ಮಗಳನ್ನ ಕೊಲೆ ಮಾಡಿ ನಮ್ಮ ಮೇಲು ಹಲ್ಲೆ ಮಾಡಿದ್ದಾನೆ.ಬದುಕಿ ಬಾಳಬೇಕಿದ್ದ ನನ್ನ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ.ನನ್ನ ಮಗಳ ಸಾವಿಗೆ ನ್ಯಾಯ ಬೇಕು.ಸೂರ್ಯ ಮತ್ತು ಆತನ ಕುಟುಂಬಸ್ಥರನ್ನ ಬಂಧಿಸಬೇಕು ಎಂದು ಮೃತ ಗೃಹಿಣಿ ತಾಯಿ ಆರೋಪ ಮಾಡಿದ್ದಾರೆ.
ಘಟನೆ ಸಂಬಂಧ ಕೆ.ಆರ್.ಎಸ್ ಠಾಣೆಗೆ ಪತಿ ಹಾಗೂ ಮನೆಯವರ ವಿರುದ್ಧ ದರ್ಶಿನಿ ಕುಟುಂಬಸ್ಥರು ದೂರು ನೀಡಿದ್ದಾರೆ.