ಮೈಸೂರು : ಕಾರ್ಮೋರೆಂಟ್ ಹಾಗೂ ಈಗ್ರೆಟ್ ಜಾತಿಯ ಪಕ್ಷಿಗಳನ್ನ ಕೊಂದ ಪ್ರಕರಣ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು
ಸಿಂದುವಳ್ಳಿ ಗ್ರಾಮದ ರವಿ ಬಂಧಿತ ಆರೋಪಿ.
ಸಿಂದುವಳ್ಳಿ ಗ್ರಾಮದ ಸಮೀಪ ಮರದಲ್ಲಿ ಕಾರ್ಮೋರೆಂಟ್ ಮತ್ತು ಈಗ್ರೆಟ್ ಪಕ್ಷಿಗಳು ಗೂಡು ಕಟ್ಟಿದ್ದವು.ಈ ವೇಳೆ ಅದೇ ಗ್ರಾಮದ ಬಂದಿತ ಆರೋಪಿ ರವಿ ಗೂಡನ್ನ ಕಿತ್ತು ಹಾಕಿ.24ಮರಿಗಳನ್ನ ಸಾಯಿಸಿ,7ಮರಿಗಳಿಗೆ ಗಾಯಗೊಳಿಸಿದ್ದಾನೆ.
ಗಾಯಗೊಂಡಿದ್ದ ಮರಿಗಳಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಸಂಬಂಧ ಅರಣ್ಯಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ RFO ಸುರೇಂದ್ರ,DRFO ಮೋಹನ್ ಕುಮಾರ್,ಗಸ್ತುಪಾಲಕ ರಾಜೇಗೌಡ,ಚಾಲಕ ಗಣೇಶ್ ಭಾಗಿಯಾಗಿದ್ದರು.
ನಂಜನಗೂಡು ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.