• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಕೂಲಿಂಗ್ ಥೆರಪಿ ಮೂಲಕ ನವಜಾತ ಶಿಶುವಿನ ಪ್ರಾಣ ಉಳಿಸಿದ ಮದರ್ ಹುಡ್ ಆಸ್ಪತ್ರೆ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಕೂಲಿಂಗ್ ಥೆರಪಿ ಮೂಲಕ ನವಜಾತ ಶಿಶುವಿನ ಪ್ರಾಣ ಉಳಿಸಿದ ಮದರ್ ಹುಡ್ ಆಸ್ಪತ್ರೆ
ಆರೋಗ್ಯಜಿಲ್ಲೆಮೈಸೂರುರಾಜ್ಯ

ಕೂಲಿಂಗ್ ಥೆರಪಿ ಮೂಲಕ ನವಜಾತ ಶಿಶುವಿನ ಪ್ರಾಣ ಉಳಿಸಿದ ಮದರ್ ಹುಡ್ ಆಸ್ಪತ್ರೆ

admin
Last updated: 2023/08/05 at 7:28 AM
admin
Share
4 Min Read
SHARE

ಮೈಸೂರಿನಲ್ಲಿಯೇ ಪ್ರಥಮ: ಮೈಸೂರಿನಮದರ್‌ಹುಡ್ ಹಾಸ್ಪಿಟಲ್‌ನಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ನವಜಾತ ಶಿಶುವಿನ ಜೀವವನ್ನು ಕೂಲಿಂಗ್‌ ಥೆರಪಿ ಉಳಿಸಿದೆ.

ಮೈಸೂರು : ಮೈಸೂರಿನ ಮದರ್‌ಹುಡ್‌ ಆಸ್ಪತ್ರೆಯ ಡಾ. ಸುಹೇಮ್‌ಅಫ್ಸರ್ ಮತ್ತುಡಾ. ಚೇತನ್ ಬಿ., ಅವರ ನೇತೃತ್ವದ ಸಲಹಾತಜ್ಞರು, ನವಜಾತ ಶಿಶು ತಜ್ಞರು ಮತ್ತುಮಕ್ಕಳ ತಜ್ಞರತಂಡಎನ್‌ಐಸಿಯುನಲ್ಲಿದ್ದ ನವಜಾತ ಶಿಶುವಿಗೆ ಯಶಸ್ವಿಯಾಗಿ ಚಿಕಿತ್ಸೆ ಕೈಗೊಳ್ಳುವುದರೊಂದಿಗೆ ನೂತನ ಬದುಕಿನ ಭರವಸೆ ನೀಡಿದ್ದಾರೆ.

ಹೆಚ್ಚಿನಆರೈಕೆಗಾಗಿ ವಿಜಯನಗರದ ಖಾಸಗಿ ಆಸ್ಪತ್ರೆಯಿಂದ ಈ ಶಿಶುವನ್ನು ಮೈಸೂರಿನ ಮದರ್‌ಹುಡ್‌ಆಸ್ಪತ್ರೆಗೆಕರೆತರಲಾಗಿತ್ತು.ಮೇ 21, 2023ರಂದು ಬೆಳಿಗ್ಗೆ ಸಾಮಾನ್ಯ ಹೆರಿಗೆಯಲ್ಲಿ ಶ್ರೀಮತಿ ಚಂದ್ರ(ಹೆಸರು ಬದಲಾಯಿಸಲಾಗಿದೆ) ಅವರುಗಂಡು ಶಿಶುವೊಂದಕ್ಕೆ ಜನ್ಮ ನೀಡಿದ್ದರು. ಈ ಶಿಶುವಿಗೆ ರಿಸಸಿಟೇಷನ್(ಮತ್ತೆ ಬದುಕಿಸುವಕ್ರಮ ಕೈಗೊಳ್ಳುವುದು) ಚಿಕಿತ್ಸಾ ವಿಧಾನದಅಗತ್ಯವಿತ್ತು. ಹೆರಿಗೆ ಸಂದರ್ಭದಲ್ಲಿಕರುಳಬಳ್ಳಿ ಶಿಶುವಿನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಇದರಿಂದ ಶಿಶುವಿಗೆ ತೀವ್ರವಾಗಿ ಉಸಿರು ಕಟ್ಟಿದಂತಾಗಿತ್ತು.

ಈ ಕಾರಣ ಶಿಶುವಿಗೆ ರಿಸಸಿಟೇಷನ್ ಕ್ರಮದಅಗತ್ಯವಿತ್ತು.ಈ ರೀತಿಕುತ್ತಿಗೆಗೆ ಕರುಳಬಳ್ಳಿ ಸುತ್ತಿಕೊಂಡಾಗಶಿಶುವಿಗೆ ನೇಣು’ ಬಿಗಿದಂತಾಗಿರುತ್ತದೆ. ಇದರಿಂದಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳ ಮೇಲೆ ಒತ್ತಡಉಂಟಾಗುತ್ತದೆ. ಇದರಿಂದ ಮೆದುಳಿನ ಆಮ್ಲಜನಕದ ಪೂರೈಕೆ ನಿಂತುಹೋಗುತ್ತದೆ. ಇಂತಹ ಸಂದರ್ಭದಲ್ಲಿತಕ್ಷಣ ವೈದ್ಯಕೀಯಕ್ರಮದ ಅಗತ್ಯವಿರುತ್ತದೆ. ಶಿಶುವನ್ನು ಮೈಸೂರಿನ ಮದರ್‌ಹುಡ್‌ಆಸ್ಪತ್ರೆಗೆ ಸೇರಿಸಲು ಶಿಫಾರಸ್ಸು ಮಾಡಿದ ವಿಜಯನಗರದಆಸ್ಪತ್ರೆಯ ವೈದ್ಯರತಂಡಶಿಶುವಿಗೆ ಥೆರಪ್ಯೂಟಿಕ್ ಹೈಪೋಥೆರ್ಮಿಯಾಅಥವಾಕೂಲಿಂಗ್‌ಥೆರಪಿ(ತAಪುಗೊಳಿಸುವ ಚಿಕಿತ್ಸೆ) ಕೈಗೊಳ್ಳುವುದನ್ನು ಪರಿಗಣಿಸಲುಮದರ್‌ಹುಡ್‌ಆಸ್ಪತ್ರೆಯನ್ನು ಸಂಪರ್ಕಿಸಿತ್ತು.

ಸಂಚಾರಿ ಎನ್‌ಐಸಿಯು ಮೂಲಕ ನವಜಾತ ಶಿಶು ತಜ್ಞರು ಮತ್ತುದಾದಿಯರತಂಡವೊAದು ವಿಜಯನಗರಕ್ಕೆ ಧಾವಿಸಿತ್ತು. ಮದರ್‌ಹುಡ್‌ಆಸ್ಪತ್ರೆಯ ಈ ಸಂಚಾರಿ ಎನ್‌ಐಸಿಯ ಆ್ಯಂಬುಲೆನ್ಸ್ಉನ್ನತ ತಂತ್ರಜ್ಞಾನ ಮತ್ತುಅತ್ಯಾಧುನಿಕ ಎನ್‌ಐಸಿಯು ಸೌಲಭ್ಯಗಳನ್ನು ಹೊಂದಿರುವ ವಾಹನವಾಗಿದ್ದು, ನವಜಾತ ಶಿಶುಗಳು ಅಥವಾಗಂಭೀರಅಸ್ವಸ್ಥತೆ ಹೊಂದಿರುವ ಶಿಶುಗಳನ್ನು ಸಾಗಿಸಲು ಬಳಸುವ ವಾಹನವಾಗಿದೆ. ಮೈಸೂರಿನ ಮದರ್‌ಹುಡ್‌ಆಸ್ಪತ್ರೆಗೆ ಕರೆತರಲಾದ ಶಿಶುವಿಗೆ 7 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆರಂಭದ ಮೂರು ದಿನಗಳಲ್ಲಿ ಶಿಶುವಿಗೆ ಸರ್ವೋಕಂಟ್ರೋಲ್ಡ್ಕೂಲಿಗ್‌ಥೆರಪಿ’ ನೀಡಲಾಯಿತು.

ಇದಕ್ಕೆ`ಕ್ರಿಟಿಕೂಲ್’ ಎಂಬ ಹೆಸರಿನತಂಪುಗೊಳಿಸುವ ಘಟಕವನ್ನು ಬಳಸಲಾಯಿತು. ಇದು ನಗರದಲ್ಲಿ ಲಭ್ಯವಿರುವತನ್ನರೀತಿಯ ಏಕೈಕ ಚಿಕಿತ್ಸಾ ಘಟಕವಾಗಿರುತ್ತದೆ. ಈಕ್ರಿಟಿಕೂಲ್‌ತಾಪಮಾನ ನಿಯಂತ್ರಿಸುವ ವ್ಯವಸ್ಥೆ ಹೊಂದಿದ್ದು, ಶಿಶುವಿನ ದೇಹದತಾಪಮಾನವನ್ನು ನಿಯಂತ್ರಿಸಲು ಮತ್ತುಸದಾ ಗಮನಿಸುತ್ತಿರಲುಇದನ್ನು ಸೂಚಿಸಲಾಗುತ್ತದೆ. ಮೂರು ದಿನಗಳ ಕಾಲ ತಾಪಮಾನವನ್ನು 33.50 ಡಿಗ್ರಿಗಳಷ್ಟು ಇರಿಸಲಾಗಿತ್ತು. ವೆಂಟಿಲೇಷನ್‌ಅಡಿಯಲ್ಲಿಸೂಕ್ತ ವಾತಾವರಣದಡಿಶಿಶುವಿಗೆ 72 ಗಂಟೆಗಳ ಕಾಲ ಚಿಕಿತ್ಸೆ ನೀಡಲಾಯಿತು. ಶಿಶುವಿಗೆ ಉನ್ನತ ವೆಂಟಿಲೇಷನ್ ಮತ್ತು ಮಲ್ಟಿಪಾರ ಮಾನಿಟರಿಂಗ್‌ಒಳಗೊAಡAತೆ ಸಮಗ್ರ ನವಜಾತ ಶಿಶು ಆರೈಕೆಕೈಗೊಳ್ಳಲಾಯಿತು.
72 ಗಂಟೆಗಳ ನಂತರ ಶಿಶು ಹಂತ ಹಂತವಾಗಿ ಚೇತರಿಸಿಕೊಂಡಿತ್ತಲ್ಲದೆ, 8ನೇ ದಿನ ಅದನ್ನುಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ಮದರ್‌ಹುಡ್‌ಆಸ್ಪತ್ರೆಯ ನವಜಾತ ಶಿಶುಶಾಸ್ತ ಸಲಹಾ ತಜ್ಞ ಮತ್ತು ಮಕ್ಕಳ ತಜ್ಞರಾದ ಡಾ. ಸುಹೇಮ್‌ ಅಫ್ಸರ್‌ಅವರು ಮಾತನಾಡಿ, ತೀವ್ರವಾಗಿ ನೇಣು ಬಿಗಿದ ನಂತರಹಲವೆಡೆಉರಿಯೂತದ ಪರಿಣಾಮವಾಗಿ ಬಹು ವ್ಯವಸ್ಥೆಯ ಸಮಸ್ಯೆಗಳು ಶಿಶುವಿಗೆ ಕಾಡಿದ್ದವು. ನಮ್ಮಕೇಂದ್ರದಲ್ಲಿ ಸಮಗ್ರಆರೈಕೆಗೆ ಮುನ್ನಶಿಶುವನ್ನು ಶಿಫಾರಸ್ಸು ಮಾಡಿದ ಸ್ಥಳವನ್ನು ನೇರವಾಗಿತಲುಪುವುದು ನಮ್ಮತಂಡಕ್ಕೆ ಬಹಳ ಮುಖ್ಯವಾಗಿತ್ತು. ಇದರಿಂದ ಮೆದುಳಿಗೆ ಅಪಾಯವನ್ನುಕಡಿಮೆ ಮಾಡಲು ಸಹಾಯವಾಗಿತ್ತು.ಈ ಚಿಕಿತ್ಸೆಯ ಹಿಂದಿನ ಶರೀರಶಾಸ್ತವನ್ನುಅರ್ಥ ಮಾಡಿಕೊಳ್ಳುವ ಸಮರ್ಪಿತ ವೈದ್ಯರ ತಂಡದ ಅಗತ್ಯ ಥೆರಪಿಗೆ ಇರುತ್ತದೆ. ಅಲ್ಲದೆ ಈ ಸ್ಥಿತಿಜೊತೆಯಲ್ಲಿ ಕಾಣಿಸಿಕೊಳ್ಳುವ ಸಂಕೀರ್ಣ ತೊಂದರೆಗಳನ್ನು ಗಮನಿಸಿ ಚಿಕಿತ್ಸೆ ನೀಡಲುಉತ್ತಮರೀತಿಯಲ್ಲಿ ಸಜ್ಜಾಗಿರುವತೀವ್ರ ನಿಗಾ ಘಟಕದಅಗತ್ಯಇರುತ್ತದೆ.

ಎನ್‌ಐಸಿಯುನಲ್ಲಿ ನಿಗದಿತವಾಗಿ ಶಿಶುವನ್ನು ಗಮನಿಸಿ ಚಿಕಿತ್ಸೆ ನೀಡಿದನಂತರ ಶಿಶುವಿನ ಆರೋಗ್ಯದಲ್ಲಿಉತ್ತಮಸುಧಾರಣೆಕಂಡು ಬಂದಿತ್ತು. ಸಾಮಾನ್ಯ ಮೆದುಳಿನ ಎಂಆರ್‌ಐಜೊತೆಗೆ ಯಶಸ್ವಿಯಾಗಿ ಈ ಶಿಶುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಈ ಅದ್ಭುತಚಿಕಿತ್ಸೆಯ ಹಿಂದಿನ ಉದ್ದೇಶವೂಅದೇಆಗಿತ್ತು’’ ಎಂದರು.

ಮದರ್‌ಹುಡ್‌ಆಸ್ಪತ್ರೆಯನವಜಾತ ಶಿಶು ಸಲಹಾತಜ್ಞರು ಮತ್ತು ಮಕ್ಕಳ ತಜ್ಞರಾದಡಾ. ಚೇತನ್ ಬಿ. ಅವರುಮಾತನಾಡಿ ಈ ವೈದ್ಯಕೀಯ ಚಿಕಿತ್ಸೆಯನ್ನು ಗಮನಿಸುವುದು ನಮಗೆ ಅತ್ಯಂತ ಮುಖ್ಯವಾಗಿತ್ತು. ಶಿಶುವಿಗೆ ಸಮಯಕ್ಕೆ ಸರಿಯಾಗಿಥೆರಪ್ಯೂಟಿಕ್ ಹೈಪೋಥರ್ಮಿಯಚಿಕಿತ್ಸೆ ನೀಡಲುಶಿಶುವನ್ನು ಉಳಿಸಿಕೊಳ್ಳುವಲ್ಲಿ ನಮ್ಮತಂಡ ಪ್ರಮುಖ ಪಾತ್ರ ವಹಿಸಿತ್ತು.ಕಡಿಮೆಆಮ್ಲಜನಕದ ಪೂರೈಕೆಯಕಾರಣವಾಗಿ ಮೆದುಳಿಗೆ ಹೆಚ್ಚಿನ ಹಾನಿ ತಡೆಯಲುಅಲ್ಲದೆ, ಪ್ರತಿಕೂಲ ನರರೋಗ ಸಂಬಂಧಿತ ಸಂಕೀರ್ಣ ತೊಂದರೆಗಳನ್ನು ತಡೆಯಲುತುರ್ತಾಗಿ ಕ್ರಿಟಿಕೂಲ್’ ಕ್ರಮವನ್ನುಆರಂಭಿಸುವುದು ನಮಗೆ ಬಹಳ ಮುಖ್ಯವಾಗಿತ್ತು. ಸಮಯಕ್ಕೆ ಸರಿಯಾಗಿಕೂಲಿಂಗ್‌ಥೆರಪಿಯನ್ನು ಶಿಶುವಿಗೆ ನೀಡುವುದು ಶಿಶುಗಳಿಗೆಸುರಕ್ಷಿತ ಮತ್ತು ಪರಿಣಾಮಕಾರಿಚಿಕಿತ್ಸೆಯಾಗಿರುತ್ತದೆ.

ಸಮಯದಲ್ಲಿಆಮ್ಲಜನಕ ಪೂರೈಕೆಯತೊಂದರೆಯನ್ನು ಅನುಭವಿಸಿರುವ ಶಿಶುಗಳಿಗೆ ಈ ಚಿಕಿತ್ಸೆ ನೀಡಲಾಗುತ್ತದೆ’’ ಎಂದರು. ಕೂಲಿಂಗ್ ಥೆರಪಿ/ಸರ್ವೋಕAಟ್ರೋಲ್ಡ್ಕೂಲಿAಗ್‌ಕುರಿತು :- ಹೊಸ ರೀತಿಯಚಿಕಿತ್ಸೆಇದಾಗಿದ್ದು, ವೈದ್ಯಕೀಯಪ್ರಾಮುಖ್ಯತೆ ಹೊಂದಿರುವುದಲ್ಲದೆ, ಸಂಪೂರ್ಣ ದೇಹವನ್ನು ತಂಪಾಗಿಸುವ ಥೆರೋಪ್ಯಾಟಿಕ್‌ಹೈಪೋಥರ್ಮಿಯ ಎಂದು ಕರೆಯಲಾಗುತ್ತದೆ. ಹೆರಿಗೆ ಸಮಯದಲ್ಲಿ ಅಥವಾಅದಕ್ಕೂ ಮುನ್ನಮೆದುಳು ಅಥವಾಇತರೆ ಅಂಗಗಳಿಗೆ ರಕ್ತದಕೊರತೆಉಂಟಾಗುವ ಮತ್ತು/ಅಥವಾಆಮ್ಲಜನಕ ಪೂರೈಕೆ ಕೊರತೆ ಅನುಭವಿಸಿರುವ ಅಲ್ಲದೆ, ಜನಿಸಿ ಆರು ಗಂಟೆಗಳಿಗೂ ಕಡಿಮೆಅವಧಿಯ ನವಜಾತ ಶಿಶುಗಳಿಗೆ ನೀಡುವ ವೈದ್ಯಕೀಯ ಚಿಕಿತ್ಸೆಇದಾಗಿರುತ್ತದೆ.

ಮೆದುಳಿಗೆ ಹಾನಿವುಂಟಾಗುವುದನ್ನು ಕಡಿಮೆ ಮಾಡಲು ಶಿಶುವಿನ ದೇಹದ ತಾಪಮಾನವನ್ನು ಕಡಿಮೆ ಮಾಡುವ ಕ್ರಮವನ್ನು ಈ ಚಿಕಿತ್ಸೆ ಒಳಗೊಂಡಿರುತ್ತದೆ. ಜೊತೆಗೆಶಿಶು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯನ್ನುಇದು ಸುಧಾರಿಸುತ್ತದೆ. ಈ ಮೇಲಿನ ಸಮಸ್ಯೆಯಇತಿಹಾಸ ಹೊಂದಿರುವಜಿಲ್ಲೆ ಮತ್ತು ಸುತ್ತಮುತ್ತಲಿನ ಶಿಶುಗಳಿಗೆ ಪ್ರಯೋಜನವಾಗಲುಏಕೈಕ ಕೂಲಿಂಗ್‌ಯುನಿಟ್‌ಆದಕ್ರಿಟಿಕೂಲ್’ಮೈಸೂರಿನಲ್ಲಿ ನಮ್ಮಆಸ್ಪತ್ರೆಯಲ್ಲಿ ಲಭ್ಯವಿರುತ್ತದೆಎಂದು ಪ್ರಕಟಿಸಲು ನಾವು ಹೆಮ್ಮೆ ಪಡುತ್ತೇವೆಎಂದು ಮದರ್‌ಹುಡ್‌ಆಸ್ಪತ್ರೆಯ ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ಅವರು ಹೇಳಿದರು.


ಮದರ್‌ಹುಡ್ ಹಾಸ್ಪಿಟಲ್ಸ್ ಕುರಿತು :-
ಮದರ್‌ಹುಡ್ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯಜಾಲವು ಭಾರತದಲ್ಲಿಅತ್ಯಂತಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಏಕ ವಿಶೇಷತೆಯಆಸ್ಪತ್ರೆ ಸರಣಿಯಾಗಿದ್ದು, 11 ನಗರಗಳಲ್ಲಿ 23 ಆಸ್ಪತ್ರೆಗಳನ್ನು ಹೊಂದಿದೆ. ಜೊತೆಗೆ 1000ಕ್ಕೂ ಹೆಚ್ಚಿನ ಮುಂಚೂಣಿಯ ಸ್ತಿçÃರೋಗ ತಜ್ಞರು, ಮಕ್ಕಳ ರೋಗತಜ್ಞರು, ನವಜಾತ ಶಿಶು ತಜ್ಞರ ಸಹಯೋಗವನ್ನು ತನ್ನಆಸ್ಪತ್ರೆಯರಾಷ್ಟçವ್ಯಾಪಿ ಜಾಲದಲ್ಲಿ ಹೊಂದಿದೆ. ತಮ್ಮ ವರ್ಗದಲ್ಲಿನಅತ್ಯುತ್ತಮ ವೈದ್ಯಕೀಯ ಪರಿಣತಿ ಮತ್ತು ಸಮಗ್ರವಾದ ಮಹಿಳಾ ಮತ್ತು ಮಕ್ಕಳ ಆರೈಕೆ ಸೇವೆಗಳಿಗೆ ಮಾನ್ಯತೆ ಪಡೆದಿರುವ ಈ ಮುಂಚೂಣಿಯಆರೋಗ್ಯ ಸೇವಾ ಸರಣಿಉನ್ನತಅಪಾಯದ ಗರ್ಭಾವಸ್ಥೆಗಳು, ಸಂಕೀರ್ಣ ಮಹಿಳಾ ಶಸ್ತçಚಿಕಿತ್ಸೆಗಳನ್ನು ನಿಭಾಯಿಸುವಲ್ಲಿಆದ್ಯಪ್ರವರ್ತಕ ಸಾಧನೆ ಹೊಂದಿದೆ. ಈ ಸಂಕೀರ್ಣ ಮಹಿಳಾ ಶಸ್ತçಚಿಕಿತ್ಸೆಗಳಲ್ಲಿ ಫರ್ಟಿಲಿಟಿ ವಿಸ್ತರಣೆಅಥವಾಯುರೊ-ಗೈನೇ ಶಸ್ತçಚಿಕಿತ್ಸೆಗಳು ಸೇರಿರುತ್ತದೆ. ಜೊತೆಗೆಗಂಭೀರ ಸ್ಥಿತಿ ಹೊಂದಿರುವ ಹಾಗೂ ಜನನ ಸಮಯದಲ್ಲಿಅತ್ಯಂತಕಡಿಮೆತೂಕ ಹೊಂದಿರುವ ನವಜಾತ ಶಿಶುಗಳ ನಿರ್ವಹಣೆಯಲ್ಲಿಆಸ್ಪತ್ರೆ ಪರಿಣತಿ ಹೊಂದಿದೆ. ದೇಶದಲ್ಲಿಅತ್ಯಂತ ಹೆಚ್ಚಿನ ಸಂಖ್ಯೆಯ 200ಕ್ಕೂ ಹೆಚ್ಚಿನ ನವಜಾತ ಶಿಶು ತೀವ್ರ ನಿಗಾ ಘಟಕ(ಎನ್‌ಐಸಿಯು) ಹಾಸಿಗೆಗಳ ಜಾಲವನ್ನು ಹೊಂದಿರುವಆಸ್ಪತ್ರೆಯಾದ ಮದರ್‌ಹುಡ್ ಹಾಸ್ಪಿಟಲ್ಸ್ ನಿಗದಿತಅವಧಿಗೂ ಮುನ್ನ ಜನಿಸಿದ ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿರುವ ಮಕ್ಕಳನ್ನು ನಿಭಾಯಿಸುವಲ್ಲಿ ಭಾರತದಲ್ಲಿ ಶಿಫಾರಸ್ಸು ಮಾಡಲಾಗುವಅತ್ಯುತ್ತಮಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

TAGGED: Mysuru motherhood hospital cooling therapy childlifesaving
admin August 5, 2023
Share this Article
Facebook Twitter Whatsapp Whatsapp LinkedIn Copy Link
Previous Article ಚೆನ್ನೈಗೆ ಹೋಗುವ ಮೊದಲು ಮೈಸೂರಿಗೆ ರಾಷ್ಟ್ರಪತಿಗಳ ಬೇಟಿ
Next Article ಮೈಸೂರು ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಕೇಳ್ತೀನಿ – ಹೆಚ್. ವಿಶ್ವನಾಥ್
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?