ಮೈಸೂರು : 56 ಕೇಸ್‌ಗಳಲ್ಲಿ ಬೇಕಾದ ಕಳ್ಳ ಮೈಸೂರು ಪೊಲೀಸರ ಬಲಗೆ ಬಿದ್ದಿದ್ದಾನೆ ಮನೆ ಹಾಗೂ ಐಷಾರಾಮಿ ಕಾರುಗಳನ್ನು ಕಳುವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಮನೆ ಹಾಗೂ ಕಾರು ಕಳ್ಳತನ ಮಾಡುತ್ತಿದ್ದ ಕುಖ್ಯಾತ.ಮೈಸೂರಿನ ವಿ ವಿ ಪುರಂ, ಹೆಬ್ಬಾಳು ಹಾಗೂ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ್ದ ಆಸಾಮಿ.ವಿ.ವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಯಾದವಗಿರಿಯಲ್ಲಿ ಕಾರು ಮತ್ತು ಚಿನ್ನಾಭರಣ ಕಳವು ಮಾಡಿದ್ದ ಈ ಪ್ರಕರಣ ಭೇದಿಸಿದಾಗ ಮತ್ತೆರಡು ಕಾರು ಕಳುಹು ಬಗ್ಗೆ ಸುಳಿವು ಬಗ್ಗೆ ಮಾಹಿತಿ ಸಿಕ್ಕಿತು ಎಂದು ಪೊಲೀಸರು ಹೇಳಿದರು.
ಆಂಧ್ರಪ್ರದೇಶ ಮೂಲದ ಸತ್ತಿಬಾಬು@ಕರಿ ಸತ್ತಿಬಾಬು@ಸತ್ತಿರೆ ಹೆಸರಿನ ವ್ಯಕ್ತಿ ಬಂಧನ.
ಮೂರು ಕಾರು, ಮತ್ತು 750 ಗ್ರಾಂ ಚಿನ್ನಾಭರಣ, ಮೂರು ವಾಚುಗಳು ವಶ ಪಡಿಸಿಕೊಳ್ಳಲಾಗಿದೆ. ಸುಮಾರು 1.19 ಕೋಟಿ ಬೆಲೆ ಬಾಳುವ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಒಟ್ಟು 56 ಪ್ರಕರಣಗಳಲ್ಲಿ ಆರೋಪಿ ಯಾಗಿದ್ದು ಸುಮಾರು 35 ವರ್ಷದ ವ್ಯಕ್ತಿ ಅಂತರ ರಾಜ್ಯ ಕಳ್ಳ ಎಂದು ತಿಳಿದುಬಂದಿದೆ.
ತೆಲಂಗಾಣದಲ್ಲಿ 20, ಆಂಧ್ರಪ್ರದೇಶದ 30, ತಮಿಳುನಾಡಿನ 3 ಹಾಗೂ ಕರ್ನಾಟಕದ 3 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಐಷಾರಾಮಿ ಕಾರು ಕದ್ದು ಶೋಕಿಗಾಗಿ ಕಡಿಮೆ ಹಣಕ್ಕೆ ಮಾರುತ್ತಿದ್ದ ಎಂದು ತಿಳಿದುಬಂದಿದೆ. ಇಂಟರ್ನೆಟ್ ಮೂಲಕ ಐಷಾರಾಮಿ ಜನರ ಮಾಹಿತಿ ಪಡೆಯುತ್ತಿದ್ದ.ಮೈಸೂರಿನ ಯಾದಗಿರಿಯಲ್ಲಿ ಅನುಮಾನವಾಗಿ ತಿರುಗಾಡುತ್ತದ ವೇಳೆ ಬಂಧನ ಮಾಡಲಾಗಿದೆ ಎಂದು ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ತಿಳಿಸಿದರು