ಮೈಸೂರು : ಕಾಂಗ್ರೆಸ್ ಪಾಳೆಯದ ಶಾಸಕ ಸಚಿವರ ಸಮನ್ವಯದ ಕೊರತೆ ಭುಗಿಲೆದ್ದ ಅಸಮಧಾನದ ಹಿನ್ನೆಲೆ
ಕೆಲ ಶಾಸಕ ಮತ್ತು ಸಚಿವರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ.
ಸಿಎಂ,ಡಿಸಿಎಂ, ಗೃಹಸಚಿವರೂ ಸೇರಿದಂತೆ 19 ಸಚಿವರು ಸೇರಿದಂತೆ ಒಟ್ಟು 37 ನಾಯಕರಿ ಹೈಕಮಾಂಡ್ ಬುಲಾವ್ ನೀಡಿದ್ದು, ನಾಳೆ ದೆಹಲಿಯಲ್ಲಿ ಹೈಕಮಾಂಡ್ ಮೀಟಿಂಗ್ ನಡೆಸಲಿದೆ. ಸ್ವಪಕ್ಷಿಯರಿಂದಲೇ ಕಿತ್ತಾಟ ಸಮಾಜಕ್ಕೆ ತಪ್ಪುಸಂದೇಶ ರವಾನೆಯಾಗುತ್ತದೆ ಎಂದು ಅಸಮಧಾನಿತ ಶಾಸಕ ಮತ್ತು ಸಚಿವ ಮುನಿಸಿಗೆ ಮದ್ದರೆಯಲು ಹೈಕಮಾಂಡ್ ನಿರ್ಧಾರ ಮಾಡಿದೆ.
ಹೈಕಮಾಂಡ್ ಬುಲಾವ್ ಬೆನ್ನಲ್ಲೇ ಸಚಿವರ ಸಭೆ ನಡೆಸಿದ್ದಾರೆ. ನಾಳೆ ದೆಹಲಿಯತ್ತ ಕೆಲ ಶಾಸಕ ಸಚಿವರು ಪಯಣ ಬೇಳಸಲಿದ್ದಾರೆ.ಅಲ್ಲದೆ ಸಮನ್ವಯ ಸಮಿತಿ ರಚನೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ ಮಾಡಲು ಚಿಂತನೆ ಮಾಡಿದೆ.ಆದರೆ ಸಮನ್ವಯ ಸಮಿತಿಗೆ ಸಿಎಂ ಡಿಸಿಎಂ ಸೇರಿದಂತೆ ಹಲವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮನ್ವಯ ಸಮಿತಿ ಮಾಡಲು ಇದು ಸಮ್ಮಿಶ್ರ ಸರ್ಕಾರವೇನಲ್ಲ.ಸ್ವತಂತ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅವಶ್ಯಕತೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನಾಳೆ ಎರಡೆರಡು ಹೈಕಮಾಂಡ್ ಸಭೆ ನಡೆಸಲಿದೆ.
ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಸ್ವಪಕ್ಷಿಯರಲ್ಲೇ ಕಿತ್ತಾಟ ಮಾಡಿದ್ರೆ ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದು ಎಂದು ಎಚ್ಚೆತ್ತೆ ಹೈಕಮಾಂಡ್ ಅಸಮಧಾನಿತ ಶಾಸಕ ಮತ್ತು ಸಚಿವರ ನಡುವೆ ಸಮನ್ವಯ ಮೂಡಿಸುವ ಯತ್ನ ಮಾಡಿದೆ.
ವಿಪಕ್ಷಗಳ ಟೀಕೆಗೆ ಅಸ್ತ್ರವಾಗುತ್ತಿರು ಆಡಳಿತಾರೂಢ ಕಾಂಗ್ರೆಸ್ ನಾಯಕರ ಒಳ ಜಗಳ ನಾಳೆ ನಡೆಯುವ ಮೀಟಿಂಗ್ ನಲ್ಲಿ ಶಾಸಕ,ಸಚಿವರಿಗೆ ಖಡಕ್ ವಾರ್ನ್ ನೀಡಲಿದ್ಯಾ ಹೈಕಮಾಂಡ್ ಎಂಬುದನ್ನು ಕಾದು ನೋಡಬೇಕಿದೆ.