ಮೈಸೂರು: ವಿವಿಯ ಕುಲಪತಿಗಳಿಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ 108 ನೇ ಸಂಸ್ಥಾಪನಾ ದಿನಾಚರಣೆಯನ್ನು ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಂದ್ರಪ್ರದೇಶದ ಗುಂಟೂರಿನ ವಿಜ್ಞಾನ ವಿಶ್ವವಿದ್ ಕುಲಪತಿ ಪ್ರೊ.ಪಿ ನಾಗಭೂಷಣ್ ಭಾಗಿಯಾಗಿದ್ದರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷಪಾರ್ಚನೆ ಸಲ್ಲಿಸಿ ಜ್ಯೋತಿ ಬೆಳಗುವ ಮೂಲಕ ಪ್ರೊ. ಪಿ.ನಾಗರಾಜು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
– ಒಂದು ಕಡೆ ಸಂಸ್ಥಾಪನೆ ದಿನಾಚರಣೆ ಮತ್ತೊಂದು ಕಡೆ ಶೈಕ್ಷಣಿಕ ಹಿನ್ನಡೆಯಿಂದ ವಿದ್ಯಾರ್ಥಿಗಳು ಕಂಗಾಲು
– ಹಣಕಾಸು ಸೌಲಭ್ಯ ಸಿಗದೆ ನಿವೃತ್ತಿ ಹೊಂದಿದ ಬೋಧಕ ಬೋಧಕೇತರ ಸಿಬ್ಬಂದಿಗಳ ಪರದಾಟ
ಕುಲಪತಿಗಳಿಲ್ಲದೆ ನಡೆಯುತ್ತಿರುವ ಸಂಸ್ಥಾಪನಾ ದಿನಾಚರಣೆಯಲ್ಲಿ ಯಾವುದೇ ಸಡಗರ ಸಂಭ್ರಮದ ವಾತಾವರಣ ಕಂಡು ಬರಲಿಲ್ಲ. ಈಗಾಗಲೇ
ಕುಲಪತಿಗಳಿಲಿಲ್ಲದೆ ವಿವಿಯ 104 ನೇ ಘಟಿಕೋತ್ಸವ ನೆದೆಗುಂಡಿಗೆ ಬಿದ್ದಿದೆ. ಕಳೆದ ಸಾಲಿನಲ್ಲಿ ಪದವಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಇನ್ನೂ ಪದವಿ ಪ್ರಧಾನವಾಗದೆ ಘಟಿಕೋತ್ಸವಕ್ಕಾಗಿ ಎದುರು ನೋಡುತ್ತಿದ್ದಾರೆ.
ರಾಜ್ಯಪಾಲರ ನಿರ್ದೇಶನದ ಪ್ರಕಾರ ಹಣಕಾಸು ವ್ಯವಹಾರಗಳನ್ನು FO ನಿರ್ವಹಿಸುತ್ತಿಸುತ್ತಿದ್ದಾರೆ
ಆಡಳಿತಾತ್ಮಕ ಅಧಿಕಾರದ (ಪ್ರಮುಖ ನೀತಿ ನಿರ್ಧಾರಗಳನ್ನು ಹೊರತು ಪಡಿಸಿ) ಕಾರ್ಯವನ್ನು ವಿವಿಯ ರಿಜಿಸ್ಟರ್ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯ 2000 ಕಾಲಂ 14 ನೇ ಪ್ರಕಾರ ಉಪ ಕುಲಪತಿಗಳು ಹುದ್ದೆ ಖಾಲಿ ಇದ್ದಾಗ ಹಂಗಾಮಿ ಉಪ ಕುಲಪತಿಗಳಾಗಿ ಸಂಬಂಧ ಪಟ್ಟ ವಿಶ್ವ ವಿದ್ಯಾನಿಲಯ ಗಳ ಡಿನ್ ಅವರನ್ನು ನೇಮಕ ಮಾಡಬೇಕು
ವಿಶ್ವ ವಿದ್ಯಾನಿಲಯದ ಕಾಯ್ದೆ ಪ್ರಕಾರ ಹಂಗಾಮಿ ಅಥವಾ ಖಾಯಂ ಉಪ ಕುಲಪತಿಗಳು ಅನುಪಸ್ತಿಯಲ್ಲಿ ಯಾವುದೇ ನಿರ್ಧಾರಗಳನ್ನು ಎಫ್ ಓ ಅಥವಾ ಕುಲಸಚಿವರು ತೆಗೆದುಕೊಳ್ಳುವಂತಿಲ್ಲ
ಈ ಹಿನ್ನಲೆ ಕುಲಪತಿಗಳಿಲ್ಲದೆ 104 ನೇ ವಿವಿ ಘಟಿಕೋತ್ಸವ ನೆದೆಗುಂದಿಗೆ ಬಿದ್ದಿದೆ.ಸಂಶೋಧನಾ ವಿದ್ಯಾರ್ಥಿಗಳ ಕೋರ್ಸ್ ವರ್ಕ್ ಪರೀಕ್ಷೆಯು ಮುಂದೂಡಿಕೆಯಾಗಿದೆ.
ಶೈಕ್ಷಣಿಕವಾಗಿ ಹಿನ್ನಡೆಯಾಗುವ ಭೀತಿಯಲ್ಲಿ ವಿವಿಯ ಸಂಶೋದನಾ ವಿದ್ಯಾರ್ಥಿಗಳು ದಿನಗಳನ್ನು ಕಳೆಯುತ್ತಿದ್ದಾರೆ. ಪ್ರಸ್ತುತ ನಿವೃತ್ತಿ ಹೊಂದಿರುವ ಬೋಧಕ ಬೋಧಕೇತರ ಸಿಬ್ಬಂದಿಗಳು ನಿವೃತ್ತಿ ಸಂಬಂಧಿತ ಹಣಕಾಸು ಸೌಲಭ್ಯಗಳು ಸಿಗದೆ ಕಂಗಲಾಗಿದ್ದು ರಾಜ್ಯಪಾಲರು ಯಾಕೆ ಮೌನವಹಿಸಿದ್ದಾರೆ ? ಈ ಬಗ್ಗೆ ಯಾಕೆ ಸರ್ಕಾರ ಇನ್ನೂ ಕುಲಪತಿ ನೇಮಕ ವಿಚಾರದಲ್ಲಿ ಜಾಣ ಮೌನವನ್ನು ವಹಿಸಿದೆ ತಿಳಿಯುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ವಿವಿಯಲ್ಲಿ ಕುಲಪತಿಗಳಿಲ್ಲದೆ ಇರುವುದು ನಿಜಕ್ಕೂ ಯಜಮಾನನಿಲ್ಲದ ಮನೆಯಂತೆ ಭಾಸವಾಗುತ್ತಿದೆ.
ಇನ್ನಾದರೂ ರಾಜ್ಯ ಸರ್ಕಾರ ಕುಲಪತಿಗಳ ನೇಮಕ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾ ಇಲ್ಲ ಹೀಗೆಯೇ ಕಾಲ ದೂಡುತ್ತಾ ಕಾದು ನೋಡಬೇಕಿದೆ.
ಆನಂದ್ ಕೆ.ಎಸ್