ಮೈಸೂರು: ಮೂರು ದಿನ ವಜಾ ಮಾಡಿದ್ದು ತಪ್ಪು ಉಚ್ಛಾಟನೆ ಮಾಡಬೇಕಿತ್ತು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಿರುದ್ಧ ಬಿಜೆಪಿ ನಗರ ವಕ್ತಾರ ಮೋಹನ್ ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿ ರೌಡಿ ಶಾಸಕರಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.ಅವರ ಹೆಸರನ್ನು ಲಕ್ಷ್ಮಣ್ ಹೇಳಬೇಕು.
ನಮ್ಮಲ್ಲಿ ಸನ್ನಡತೆಯುಳ್ಳ ಶಾಸಕರಿದ್ದಾರೆ.
ಸುರೇಶ್ ಕುಮಾರ್,ಸುನೀಲ್ ಕುಮಾರ್,ಶ್ರೀವತ್ಸ ಅಂತವ್ರಿದ್ದಾರೆ.ಲಕ್ಷ್ಮಣ್ ಈ ಕೂಡಲೇ ರೌಡಿ ಪಟ್ಟಿ ಬಿಡುಗಡೆ ಮಾಡಬೇಕು.ಇಲ್ಲದಿದ್ದರೆ ಪಕ್ಷದ ಕ್ಷಮಾಪನೆ ಕೇಳಬೇಕು ಎಂದು ಮೋಹನ್ ಒತ್ತಾಯ ಮಾಡಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ ದಲಿತ ಕಾರ್ಡ್ ಪ್ಲೇ ಮಾಡಿದೆ.ಇಂತಹ ಹೀನ ರಾಜಕೀಯ ಮಾಡಲು ಹೊರಟಿದೆ.ದಲಿತರ ಮೇಲೆ ಅಷ್ಟೊಂದು ಪ್ರೀತಿಯಿರುವ ಕಾಂಗ್ರೆಸ್ ದಲಿತ ಮುಖ್ಯಮಂತ್ರಿ ಮಾಡಲಿ ಎಂದು
ಸವಾಲು ಹಾಕಿದರು. ಅಲ್ಲದೆ ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ ಬಂಧಿತರ ಕುರಿತು ಗೃಹ ಸಚಿವರು ಎರಡು ಹೇಳಿಕೆ ಕೊಟ್ಟರು.ಮೊದಲು ಅವರು ಉಗ್ರರಲ್ಲ ಎಂದರು.ನಂತರ ನನ್ನ ಹೇಳಿಕೆ ತಪ್ಪಾಗಿದೆ ಎಂದು ಪ್ಲೇಟ್ ಬದಲಾಯಿಸಿದರು ಎಂದು ಗೃಹ ಸಚಿವ ಪರಮೇಶ್ವರ್ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಪ್ರತಾಪ್ ಸಿಂಹ ಎಲ್ಲಾ ವಿಷಯದಲ್ಲೂ ಮೂಗು ತೂರಿಸಿತ್ತಾರೆ ಎಂದು ಲಕ್ಷ್ಮಣ್ ಹೇಳಿಕೆಗೆ ಕೆಂಡ ಕಾರಿದ ಅವರುಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದ ಹಾಗೆ ಲಕ್ಷ್ಮಣ್ ಇದ್ದಾರೆಪ್ರತಾಪ್ ಸಿಂಹ ಸುಖ ಸುಮ್ಮನೆ ನಿಮ್ಮ ತರ ಮಾತನಾಡಲ್ಲ.ಅವರು ಮೈಸೂರಿನ ಎಂಪಿ ಆಗಿದ್ದಾರೆ.
ಅವರ ವ್ಯಾಪ್ತಿಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊನ್ನೆಯ ವಸ್ತು ಪ್ರದರ್ಶನದಲ್ಲಿ ಸಭೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಯಡಿ ಅನುದಾನ ತಂದಿದ್ದಾರೆ.ವಸ್ತು ಪ್ರದರ್ಶನದ ಅಭಿವೃದ್ಧಿಗೆ ಪ್ರತಾಪ್ ಸಿಂಹ ಪಣ ತೊಟ್ಟಿದ್ದಾರೆ.ಪ್ರಜಾ ಪ್ರಭುತ್ವ ಎಂದರೆ ಏನು ಎಂದು ಲಕ್ಷ್ಮಣ್ ಗೆ ಗೊತ್ತಿಲ್ಲ. ಅದಕ್ಕೆ ಅವರು ಈ ರೀತಿ ಮಾತನಾಡುತ್ತಾರೆ ಎಂದು ಲಕ್ಷ್ಮಣ್ ವಿರುದ್ಧ ಹರಹಾಯ್ದಿದರು.