ಮೈಸೂರು : ಗೃಹಲಕ್ಷ್ಮಿ ಯೋಜನೆಯ ದಿಕ್ಕು ತಪ್ಪಿಸಲು ವಿರೋಧ ಪಕ್ಷಗಳ ಸಂಚು ರೂಪಿಸಿವೆ ಯೋಜನೆಯ ಪ್ರಚಾರ ತಡೆಯಲು ಸದನದಲ್ಲಿ ಬಿಜೆಪಿ – ಜೆಡಿಎಸ್ ನಿಂದ ಗದ್ದಲ ಮಾಡಿವೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿಯ ನಾಲ್ಕನೇ ಯೋಜನೆ ಪ್ರಾರಂಭವಾಗಿದೆ.
ಒಂದು ಕೋಟಿ 60 ಲಕ್ಷ ಮಂದಿಗೆ ಇದು ತಲುಪಲಿದೆ.
ಈ ಯೋಜನೆಯನ್ನು ದಿಕ್ಕು ತಪ್ಪಿಸಲು ಬಿಜೆಪಿ ಫ್ರೀ ಪ್ಲಾನ್ ಮಾಡಿದ್ದಾರೆ.ಸದನದಲ್ಲಿ ನೆನ್ನೆ ಒಬ್ಬ ದಲಿತ ಡೆಪ್ಯೂಟಿ ಸ್ಪೀಕರ್ ನ್ನು ನಿಂದಿಸಿದ್ದಾರೆ.ಗಲಾಟೆ ಮಾಡಿದ ಉದ್ದೇಶವನ್ನು ಬಿಜೆಪಿಯವರು ತಿಳಿಸಬೇಕಿತ್ತು.
ಇಲ್ಲಿಯವರೆಗೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲಾಗಿಲ್ಲ ಎಂದು ಕಿಡಿಕಾರಿದರು.
10 ಮಂದಿ ಶಾಸಕರನ್ನ ಅಮಾನತ್ತು ಮಾಡಿರುವವರನ್ನು ಶಾಶ್ವತವಾಗಿ ಅಮಾನತ್ತು ಮಾಡಿ.ಮುಸ್ಲಿಂ ಹಾಗೂ ದಲಿತರು ಸ್ಪೀಕರ್ ಆಗಿರುವುದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.ದೇಶದ ಮೂರು ರಾಜ್ಯಗಳ ಸಿಎಂ ಆಗಮಿಸಿದ್ದರು, ಆದ್ದರಿಂದಲೇ ಪ್ರೊಟೊಕಾಲ್ ಪ್ರಕರವೇ ಕರೆದುಕೊಂಡು ಬರಬೇಕು.ಅದಕ್ಕಾಗಿ IAS ಅಧಿಕಾರಿಗಳನ್ನ ಅವರನ್ನ ಕಳುಹಿಸಲಾಗಿದೆ.ಗೃಹ ಲಕ್ಷ್ಮಿ ಯೋಜನೆಯ ಪ್ರಚಾರ ಸಿಗಬಾರದು ಎಂಬುದು ಬಿಜೆಪಿಗರ ಏಕೈಕ ಉದ್ದೇಶವಾಗಿದೆ ಎಂದರು.
ಜೆಡಿಎಸ್ ನವರು ಬಿಜೆಪಿಯ ಬಿ ಟೀಮ್ ಎಂದು ಹೇಳಿದ್ದೆವು.ಅದನ್ನ ಅವರೇ ಇದೀಗ ಸ್ಪಷ್ಟ ಪಡಿಸುತ್ತಿದ್ದಾರೆ.
ಕೆಲವೇ ದಿನಗಳಲ್ಲಿ ಮೂರು ಒಳಾಗಲಿದೆ.
ಕೊನೆಗೆ ಜೆಡಿಎಸ್ ನಲ್ಲಿ ಒಬ್ಬರೇ ಉಳಿದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಭವಿಷ್ಯ ನುಡಿದರು.