ಮೈಸೂರು : ದೇಶ, ಧರ್ಮದ ಸಲುವಾಗಿ ಹೃದಯದಲ್ಲಿ ಜಾಗವಿಡಿ ಎಂದು ಅಧಿಕಾರಿಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿವಿಮಾತು ಹೇಳಿದರು.
ತಿ.ನರಸೀಪುರದ ಹಿಂದೂ ಕಾರ್ಯಕರ್ತ ವೇಣು ಗೋಪಾಲ್ ನೆನಪಿನ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ 27 ಕೇಸ್ ಹಾಕಿದ್ದರು.ಎಲ್ಲವೂ ಕೂಡ ಈಗ ಖುಲಾಸೆ ಆಗಿವೆ.ಅಮಿತ್ ಶಾ ವಿರುದ್ಧವೂ ಕೂಡ ಹೀಗೆ ಕೇಸ್ ಹಾಕಿದ್ದರು.ನಮ್ಮ ವಿರುದ್ಧ ಕೇಸ್ ಹಾಕಿ ನ್ಯಾಯಾಲಯಕ್ಕೆ ಅಲೆದಾಡಿಸಿದ್ದರು.
ತಿಂಗಳು ಪೂರ್ತಿ ಕೋರ್ಟ್ ಸುತ್ತಬೇಕು ಅಂತ ಕೇಸ್ ಜಡಿದಿದ್ರು.ಪೊಲೀಸರನ್ನು ರಾಜಕಾರಣಗಳಿಗೂ ಕಂಟ್ರೋಲ್ ಮಾಡುತ್ತಿದ್ದಾರೆ.ಟಿ.ನರಸೀಪುರದಲ್ಲೂ ಅಂತಹದ್ದೆ ಕಂಟ್ರೋಲಿಂಗ್ ನಡೆಯುತ್ತಿದೆ ಎಂದು ಹೇಳಿದರು.
ನಾವು ಎಂದಿಗೂ ಕೂಡ ಯಾರನ್ನೂ ಕಂಟ್ರೋಲ್ ಮಾಡಿಲ್ಲ.ಯತ್ನಾಳ್ ಸೋಲಿಸಲು ಯತ್ನ ಮಾಡಿದ್ರು.
ವಿಧಾನಸೌಧದಲ್ಲಿ ನನ್ನ ಬಾಯಿ ಮುಚ್ಚಿಸಬೇಕು ಅಂದಿದ್ರು.
ನನ್ನ ಸೋಲಿಸಬೇಕೆಂದು ಚೆನ್ನಾಗಿ ಕುಡಿದು ತಿಂದ್ರು.
ಇದಕ್ಕಾಗಿ ಹತ್ತಾರು ಕೋಟಿ ಖರ್ಚು ಮಾಡಿದ್ರು
ರಿಸಲ್ಟ್ ದಿನ ಫಲಿತಾಂಶ ಬಂದಾಗ ಟಿವಿಗಳನ್ನು ಹೊಡೆದು ಹಾಕಿದ್ರು.ನನ್ನ ಗೆಲವಿನಿಂದ ಹಲವರು ಹತಾಶರಾದರು.
ನಾನೆಂದು ಬದಲಾಗುವುದಿಲ್ಲ.ಹಿಂದುಗಳು ಒಂದಾಗಬೇಕು.ಯಾರನ್ನೋ ಎಂಎಲ್‌ಎ ಮಾಡಲು ಅಲ್ಲ.
ದೇಶದ ಉಳಿವಿಗಾಗಿ ಎಲ್ಲರೂ ಒಗ್ಗೂಡಬೇಕು ಎಂದು ಕಿವಿಮಾತು ಹೇಳಿದರು
ನಾವು ಇಂದು ಕೇಸರಿ ಶಾಲು, ಕುಂಕುಮ ಹಾಕುತ್ತಿರುವುದು ವೇಣು ಅಂತವರಿಂದ.ಜಿಲ್ಲಾ ಎಸ್‌ಪಿ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕುಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.ಒಂದು ವೇಳೆ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತೇವೆ.ನಾವು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ನಾನು ಎಂದಿಗೂ ಹೊಂದಾಣಿಕೆ ಪಾಲಿಟಿಕ್ಸ್ ಮಾಡಲ್ಲ.
ನ್ಯಾಯ ಅಂದರೆ ನ್ಯಾಯವೇ ,ಅನ್ಯಾಯ ಎಂದರೆ ಅನ್ಯಾಯವೇ.ನಾವು ಯಾವುದಕ್ಕೂ ಸಿದ್ಧರಿರುತ್ತೇವೆ.
ಫೇಸ್ ಬುಕ್ ನಲ್ಲಿ ಕೆಲವರು ಕಾಮೆಂಟ್ ಮಾಡ್ತಾರೆ
ಅವರು ಯಾರಿಗೆ ಹುಟ್ಟಿದ್ದಾರೋ ಗೊತ್ತಿಲ್ಲ.
ಮೋದಿ ಚಿನ್ನದ ರೋಡ್ ಮಾಡ್ತೀನಿ ಅಂತ ಹೇಳಿಲ್ಲ.
ಸುರಕ್ಷಿತ ರಸ್ತೆ ಮಾಡುತ್ತೀನಿ ಎಂದಿದ್ದಾರೆ ಎಂದು ಹೇಳಿದೆ.
ಮಾತಾನಾಡಿದರೆ ನನಗೆ ನೋಟಿಸ್ ಕೊಡ್ತಾರೆ.
ನಮ್ಮ ಪಕ್ಷದವರೇ ನನ್ನನ್ನ ಟೀಕಿಸ್ತಾರೆ ಎಂದು ಸ್ವಪಕ್ಷದವರ ವಿರುದ್ಧ ಕೂಡ ಕಿಡಿಕಾರಿದರು.
ಯತ್ನಾಳ್‌ಗೆ ಜ್ಞಾನ ಇಲ್ಲ, ಹಿಂದುತ್ವ ಮಾತ್ರ ಅಂತ ಹೇಳ್ತಾರೆ.
ಅವರ ಬಳಿ ಹಣ ಇಲ್ಲ ಅಂತಾರೆಯಾಕೆ ಸಮಾಜ ಸುಧಾರಕರೂ ಬರಬಾರದ?ನನಗೆ ಅಧಿಕಾರ ಕೊಟ್ಟು ನೋಡಿ ನನ್ನ ಜ್ಞಾನ ಎಷ್ಟಿದೆ ಅಂತಾ ತೋರಿಸ್ತಿನಿ.
ಹೊಂದಾಣಿಕೆಯಿಂದಲೇ ಕೆಲ ಕಡೆ ಹಿಂದುಗಳ ಹತ್ಯೆಯಾಗಿದೆ.ಆ ಹೊಂದಾಣಿಕೆಯಿಂದಲೇ ನಮ್ಮ ನಾಶಕ್ಕೆ ಕಾರಣವಾಗಿದೆ ಎಂದರು ಅಲ್ಲದೆ ಮೃತರ ಕುಟಂಬಕ್ಕೆ ಎರಡು ಲಕ್ಷ ರೂ. ವೈಯಕ್ತಿಕವಾಗಿ ಪರಿಹಾರ ಘೋಷಣೆ ಮಾಡಿದರು.