ಮೈಸೂರು : ಮೈಸೂರಿನಲ್ಲಿ ಬೈಕ್ ವೀಲಿಂಗ್ ಮಾಡುವವರ ಹೆಡೆಮುರಿ ಕಟ್ಟಿದ ಪೊಲೀಸರು ಪಾಠ ಕಲಿಸಿದ್ದಾರೆ.
ನಗರದ ಹೊರ ವಲಯದ ರಿಂಗ್ ರಸ್ತೆ ಸೇರಿದಂತೆ ಹಲವೆಡೆ ಬೈಕ್ ವೀಲಿಂಗ್ ಮಾಡಿ ವಾಹನ ಸವಾರರಿಗೆ ಅಪಾಯ ಉಂಟು ಮಾಡುತ್ತಿದ್ದ ಕಿಡಿಗೇಡಿಗಳು.
ಸದ್ಯ ಮೂರು ಬೈಕ್ ಗಳೊಂದಿಗೆ ವೀಲಿಂಗ್ ಮಾಡಿದ್ದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.
ನಗರದ ನರಸಿಂಹರಾಜ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು, ಸಿದ್ದಾರ್ಥ ಠಾಣೆಯ ವ್ಯಾಪ್ತಿಯಲ್ಲಿ ಓರ್ವನ ಪತ್ತೆ ಮಾಡಿ ಸೆರೆ ಹಿಡಿದಿರುವ ಪೊಲೀಸರು.
ಸದ್ಯ ಬೈಕ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು.
ಇತ್ತೀಚಿಗೆ ರಿಂಗ್ ರಸ್ತೆ ಸೇರಿದಂತೆ ಹಲವೆಡೆ ಹೆಚ್ಚಾಗಿದ್ದ ಬೈಕ್ ವೀಲಿಂಗ್ ಹಾವಳಿ.
ಸದ್ಯ ಮೂವರನ್ನ ಸೆರೆ ಹಿಡಿಯುವ ಮೂಲಕ ವೀಲಿಂಗ್ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.