ಬೆಂಗಳೂರು : ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ ಆ ಪುಣ್ಯಾತ್ಮ ದೇವೇಗೌಡ ನನ್ನನ್ನು ಪಕ್ಷದಿಂದ ಕಿತ್ತಾಕಿದರು ಎಂದು ವಿಧಾನ ಪರಿಷತ್ ನಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಜೆಡಿಎಸ್ ದಿನಗಳನ್ನು ನೆನಪಿಸಿದರು.
ನಾನು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಅಧ್ಯಕ್ಷನಾಗಿದ್ದೆ. ದೇವೇಗೌಡರು ರಾಷ್ಟೀಯ ಅದ್ಯಕ್ಷರಾಗಿದ್ದರು ನನ್ನ ನೇತೃತ್ವದಲ್ಲಿ 2004 ರಲ್ಲಿ ಜೆಡಿಎಸ್ ಪಕ್ಷಕ್ಕೆ 57 ಸೀಟು ಬಂತು ನಂತರ 2005ರಲ್ಲಿ ನನ್ನನ್ನು ಪಕ್ಷದಿಂದ ತೆಗೆದು ಬಿಸಾಕಿದರು ನಾನೇನು ಪಕ್ಷ ಬಿಟ್ಟಿರಲಿಲ್ಲ ಎಂದು ದೇವೇಗೌಡರ ನಡೆಯನ್ನು ಖಂಡಿಸಿದರು.
ನಾನು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲ್ಸ ಮಾಡುತ್ತಿದೆ ಪಕ್ಷ ವಿರೋಧಿ ಕೆಲ್ಸ ಮಾಡ್ತಿದ್ದಿನಿ ಎಂದು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ರು. ಆದರೆ ನಾನು ಯವತ್ತು ಪಕ್ಷಕ್ಕೆ ಹಾನಿಯಾಗುವ ಕೆಲ್ಸ ಮಾಡಿಲ್ಲ ಎಂದು ಹಳೆಯ ದಿನಗಳ ಕುರಿತು ಮಾತನಾಡಿದರು.
ನಾನು ಪಕ್ಷ ಬಿಟ್ಟಾಗ ನನ್ನ ಜೊತೆ 8 ಮಂದಿ ಶಾಸಕರು ಬಂದರು. ಸತೀಶ್ ಜಾರಕಿಹೊಳಿ ಮಂಚನಹಳ್ಳಿ ಮಹದೇವು ಮಹದೇವಪ್ಪ, ವೆಂಕಟೇಶ್ ಇನ್ನೂ ಅನೇಕರು ಅಂದು ನನ್ನ ಜೊತೆ ಜೆಡಿಎಸ್ ತೊರೆದು ಬಂದರು ಅವರನ್ನೆಲ್ಲ ನಾನು ಮರೆಯಲು ಆಗಲ್ಲ ಎಂದಿದ್ದಾರೆ.
2006 ರಲ್ಲಿ ನಾನು ಕಾಂಗ್ರೆಸ್ ಪಕ್ಷ ಸೇರಿದೆ ನನ್ನ ಜೊತೆ ಅನೇಕ ಮುಖಂಡರು ಪಕ್ಷ ಸೇರ್ಪಡೆಯಾದರು ನಂತರ ಹೋರಾಟದ ಮೂಲಕ ಪಕ್ಷ ಕಟ್ಟಿದ್ದೇವೆ ಕಾಂಗ್ರೆಸ್ ಪಕ್ಷ ನನ್ನನು ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ. ನಾನು ಯಾವಾಗಲೂ ಕಾಂಗ್ರೆಸ್ ಪಕ್ಷಕ್ಕೆ ಚಿರಋಣಿಯಾಗಿದ್ದೇನೆ ಎಂದು ತಿಳಿಸಿದರು.