ಮೈಸೂರು: ಮೈಸೂರು ಮಹಾನಗರ ಪಾಲಿಕೆ ಜುಲೈ ಮಾಹೆಯ ಕೌನ್ಸಿಲ್ ಸಭೆಯ ಪಾಲಿಕೆಯ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಿತು.
ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಭೆ ಆರಂಭದಲ್ಲೇ ಗದ್ದಲ ಉಂಟಾಯಿತು
ಸಭೆಯಲ್ಲಿ ಪಾಲಿಕೆಯ ಸೆಕ್ಯೂರಿಟಿ ಏಜೆನ್ಸಿ ಕುರಿತು ಮಾಹಿತಿ ನೀಡುವಂತೆ ಜೆಡಿಎಸ್ ಸದಸ್ಯ ಎಸ್ ಬಿ ಎಂ ಮಂಜು ಒತ್ತಾಯ ಮಾಡಿದರು. ಅಲ್ಲದೆ ಟವರ್ ವಿಚಾರವಾಗಿ ಪಾಲಿಕೆಗೆ ಸಾಕಷ್ಟು ಹಣ ಬರಬೇಕು ಅದನ್ನು ವಸೂಲಿ ಮಾಡಿ ಅವ್ರಿಗೆ ಕೊಟ್ಟುರಿವ ಟೆಂಡರ್ ಮುಗಿದಿದೆ ಯಾರೋ ದುಡ್ಡು ಮಾಡಲು ನಮ್ಮ ಪಾಲಿಕೆ ಬಲಿಯಾಗಬಾರದು ಎಂದು ಹೇಳಿದರು.
ಕೌನ್ಸಿಲ್ ಸಭೆಯಲ್ಲಿ ಉಪಮೇಯರ್ ರೂಪ,ಪಾಲಿಕೆ ಆಯುಕ್ತ ಲಕ್ಷ್ಮಿ ಕಾಂತ್ ರೆಡ್ಡಿ ಸೇರಿದಂತೆ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.