ಮೈಸೂರು : ನನ್ನ ಗಂಡ ಹತ್ತು ಜನ ಬಂದರೂ ಹೆದರಲ್ಲ.
ನನ್ನ ಗಂಡ ಹತ್ಯೆ ವೈಯಕ್ತಿಕ ಕಾರಣ ಕೊಲೆ ಅಲ್ಲ.
ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು
ಮೃತ ವೇಣುಗೋಪಾಲ್ ನಾಯಕ್ ಪತ್ನಿ ಪೂರ್ಣಿಮಾ ಹೇಳಿಕೆ ನೀಡಿದ್ದಾರೆ.
ನಾನು,ವೇಣುಗೋಪಾಲ್ ಪ್ರೀತಿಸಿ ಮದುವೆ ಆಗಿದ್ದೆವು.
ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ.ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇಲ್ಲ.ಆದರೂ ಅದ್ದೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಿದ್ದೆವು.ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ.ನನ್ನ ಗಂಡನ ಸಾವಿಗೆ ನ್ಯಾಯ ಬೇಕು.
ಇಲ್ಲವಾದರೆ ನಾನು,ನನ್ನ ಮಗಳು ಗಂಡ ಸತ್ತಂತೆಯೇ ಸಾಯುತ್ತೇವೆ ಎಂದರು.
ಇಂದು ನನ್ನ ಗಂಡನನ್ನ ಸಾಯಿಸಿದ್ದಾರೆ.
ಮುಂದಿನ ವರ್ಷ ನಾನು ಹನುಮ ಜಯಂತಿ ಮಾಡುತ್ತೇನೆ.
ಆಗ ನನ್ನನ್ನು ಸಾಯಿಸುತ್ತಾರೆ.ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದ್ರೆ ಅವಳನ್ನೂ ಸಾಯಿಸುತ್ತಾರೆ.ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ.
ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ.
ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆಗ್ರಹ ಮಾಡಿದರು.