ಮೈಸೂರು : ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸುದ್ದಿಗೋಷ್ಠಿಯನ್ನು ಪತ್ರಕರ್ತರ ಭವನದಲ್ಲಿ ನಡೆಸಲಾಯಿತು.
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಈ ಬಾರಿಯ ಬಜೆಟ್ ಸಮತೋಲನದಿಂದ ಕೂಡಿದೆ
ಗ್ಯಾರೆಂಟಿಗಳಿಗೆ ಆದ್ಯತೆ ನೀಡಿರುವ ಬಜೆಟ್ ಆಗಿದೆ
ಗ್ಯಾರೆಂಟಿ ಯೋಜನೆಗೆ ಹೆಚ್ಚಿನ ಅನುದಾನ ಹೋಗಿದೆ
ಹಾಗಾಗಿ ಬೇರೆ ಕ್ಷೇತ್ರಗಳಿಗೆ ಅನುದಾನ ಕಡಿಮೆ ಸಿಕ್ಕಿದೆ
ಈ ಬಜೆಟ್ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.ಎಪಿಎಂಸಿ ಕಾಯ್ದೆ ವಾಪಸ್ ಪಡೆದಿದ್ದು ಸ್ವಾಗತಾರ್ಹಆದರೆ ಕೃಷಿ ಉತ್ಪನ್ನಗಳ ಬೆಲೆಯನ್ನು ಸರ್ಕಾರ ನಿಗದಿ ಮಾಡಬೇಕಿತ್ತು ಎಂದು ನಾಗೇಂದ್ರ ಹೇಳಿದರು.
ಜಾನುವಾರು ಹತ್ಯೆ ಕಾಯ್ದೆಯನ್ನು ವಾಪಸ್ ಪಡೆಯಬೇಕಿತ್ತುಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು. ಈ ಸಂಭಂದ ಸದ್ಯದಲ್ಲೇ ಸಿಎಂ ಬೇಟಿ ಮಾಡಿ ಒತ್ತಾಯ ಮಾಡುತ್ತೇವೆ ಎಂದರು.
ಪಡಿತರ ವ್ಯವಸ್ಥೆಗೆ ರಾಜ್ಯದ ರೈತರಿಂದಲೇ ಅಹಾರೋತ್ಪನ್ನಗಳನ್ನು ಖರೀದಿಸಬೇಕು
ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆಗೆ ರೈತರಿಂದಲೇ ಭತ್ತ ರಾಗಿ ಜೋಳ ಎಣ್ಣೆಕಾಳು ಖರೀದಿಸಬೇಕು
ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಿ ರೈತರನ್ನು ರಕ್ಷಿಸಬೇಕು
ರಾಜ್ಯದ 15 ತಿಂಗಳಲ್ಲಿ ತೆಂಗು ಬೆಳೆಯುತ್ತಿದೆ
ಇದು ವಾಣಿಜ್ಯ ಹಾಗೂ ಆಹಾರ ಬೆಳೆ ಆಗಿದೆ
ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ
ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನ್ಯಾಯಯುತ ಬೆಲೆ ಕೊಟ್ಟು ಕೊಬ್ಬರಿ ಕೊಳ್ಳಲ್ಲು ಮುಂದಾಗಬೇಕು
ಕಳೆದ ಬಾರಿ 19000 ಸಾವಿರ ಇದ್ದ ಕೊಬ್ಬರಿ ಈ ಬಾರಿ 7500 ರೂ ಆಗಿದೆ
ಆದ್ದರಿಂದ 5 ಸಾವಿರ ಸಹಾಯ ಧನ ನೀಡಬೇಕು
ನಾಗೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು
21ರಂದು ರೈತ ಹುತಾತ್ಮರ ದಿನಾಚರಣೆ ಮತ್ತು ರೈತ ಚಳುವಳಿ ಮುಂದಿನ ಹೋರಾಟದ ಘೋಷಣಾ ಸಮಾವೇಶ
ನರಗುಂದ ನವಲಗುಂದ ರೈತ ಬಂಡಾಯ ನಡೆದು 21ನೆ ತಾರೀಖು 43 ವರ್ಷ ತುಂಬತ್ತೆ
ಈ ಸಮಾವೇಶ 21ರಂದು ಧಾರವಾಡದಲ್ಲಿ ನಡೆಯುತ್ತದೆ
ಮಾಜಿ ಲೋಕಸಭೆ ಸದಸ್ಯರಾದ ವಡ್ಡೆ ಶೋಭನಾಧಿಶ್ವರ ರಾವ್ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ
ಶಾಸಕರಾದ ಬಿ ಆರ್ ಪಾಟೀಲ್ ದರ್ಶನ್ ಪುಟ್ಟಣ್ಣಯ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು
ಸುದ್ದಿಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದರು