ಬೆಂಗಳೂರು : ಬೆಲೆ ಏರಿಕೆ ಹಿನ್ನೆಲೆ ಜನಸಾಮಾನ್ಯರು ಈಗ ಟೊಮೆಟೊ ಖರೀದಿ ಮಾಡೋದೇ ಅಸಾಧ್ಯವಾಗಿದೆ. ಚಿನ್ನದ ಬೆಲೆ ಎನಿಸಿಕೊಂಡಿರುವ ಸಂದರ್ಭದಲ್ಲೇ 2 ಟನ್ ಟೊಮೆಟೊ ಹೊತ್ತಿದ್ದ ಬುಲೆರೋ ವಾಹನವನ್ನೇ ಖದೀಮರು ಎಗರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ನಲ್ಲಿ ಘಟನೆ ನಡೆದಿದೆ. ರೈತರು ಚಿತ್ರದುರ್ಗದಿಂದ ಆರ್‌ಎಂಸಿ ಯಾರ್ಡ್‌ಗೆ ಟೊಮೆಟೊ ಲೋಡ್ ಅನ್ನು ತಂದಿದ್ದರು. ರೈತರು ಯಾವಾಗ ವಾಹನವನ್ನು ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದರೋ ಆಗ ಬಂದ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೊ ಹೊತ್ತೊಯ್ದಿದ್ದಾರೆ
250 ಕ್ಕೂ ಹೆಚ್ಚು ಟೊಮೆಟೊ ಟ್ರೇ ಇದ್ದ ಬುಲೆರೋ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವರು ಹೈಜಾಕ್ ಮಾಡಿದ್ದಾರೆ. ಟೊಮೆಟೊ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್‌ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದಾರೆ. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‌ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಎಂದು ಅವಾಜ್ ಹಾಕಿದ್ದಾರೆ
ಹಣ ಇಲ್ಲ ಎಂದಾಗ ಮೊಬೈಲ್‌ನಲ್ಲಿದ್ದ ಹಣ ಟ್ರಾನ್ಸ್ಫರ್ ಮಾಡಿಕೊಂಡು ಟೊಮೆಟೊ ಗಾಡಿಯಲ್ಲಿ ರೈತನನ್ನು ಕೂರಿಸಿಕೊಂಡು ಹೈಜಾಕ್ ಮಾಡಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್‌ನ ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ