ಮೈಸೂರು : ಸಂಸದ ಪ್ರತಾಪ್ ಸಿಂಹ ಕಾರಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಗರದ ಜಲದರ್ಶಿನಿಯಲ್ಲಿ ನಡೆದಿದೆ.
ಕಚೇರಿಯ ಗೇಟ್ ಬಳಿ ಪ್ರತಾಪ್ ಸಿಂಹ ಕಾರ್ ಬರುತ್ತಿದ್ದಂತೆ ಓಡೋಡಿ ಬಂದು ಮುತ್ತಿಗೆ ಹಾಕಿದ್ದಾರೆ.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ತಡೆದಿದ್ದಾರೆ. ಕಾರ್ಯಕರ್ತರನ್ನು ಕಂಡು ಕಾರ್ ಗ್ಲಾಸ್ ಏರಿಸಿ ಸಂಸದ ಪ್ರತಾಪಸಿಂಹ ಅಲ್ಲಿಂದ ಹೊರಟಿದ್ದಾರೆ.
ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಕೊಡಲೆಂದು ಕೈ ಕಾರ್ಯಕರ್ತರಿಂದ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಪ್ರತಾಪ್ ಸಿಂಹ ಎದುರೇ ಪೇಪರ್ ತಿಮ್ಮ ಎಂದು ಪ್ರತಿಭಟನಾಕರರು ಅಣಕಿಸಿದ್ದಾರೆ