ಮೈಸೂರು : ಅಪ್ರಾಪ್ತ ಬಾಲಕರ ನಡುವೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ನಿಚೌಕ ಬಳಿ ನಡೆದಿದೆ.ಫರ್ವೇಜ್ ಖಾನ್(17) ಮೃತ ದುರ್ದೈವಿ.
ಕೃತ್ಯವೆಸಗಿದ ಆರೋಪಿ 15 ವರ್ಷದ ಬಾಲಕನಾಗಿದ್ದು ಮಂಡಿ ಠಾಣೆ ಪೊಲೀಸರ ವಶದಲ್ಲಿದ್ದಾನೆ.ಡಿ.ಬಿ.ಕೇರಿಯ ನಿವಾಸಿ ಆರೋಪಿ ಬಾಲಕ ಆಟವಾಡಲು ಸನ್ನಿಚೌಕದ ಬಳಿ ಇರುವ ತನ್ನ ಸಹೋದರಿ ಮನೆಗೆಬಂದಿದ್ದಾನೆ.ಆಟವಾಡುವ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗಿದೆ.ಈ ವೇಳೆ ಪರ್ವೇಜ್ ಖಾನ್ ಗೆ ಚಾಕುವಿನಿಂದ ಆರೋಪಿ ಇರಿದಿದ್ದಾನೆ.ಸ್ಥಳದಲ್ಲೇ ಫರ್ವೇಜ್ ಖಾನ್ ಮೃತಪಟ್ಟಿದ್ದಾನೆ.ಆರೋಪಿಯನ್ನ ಮಂಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.