ಮೈಸೂರು : ಶ್ರಮ ಒಬ್ಬರದು ಅದರ ಪ್ರತಿಫಲವನ್ನು ಅನುಭವಿಸುವವರು ಯಾರೋ ಹಿಂದಿನಿಂದಲೂ ಇದು ನಡೆದುಕೊಂಡೇ ಬಂದಿದೆ ಏನು ಮಾಡಲಾಗದು ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದ್ದಾರೆ
ವಿಧಾನಸೌಧ ಕಟ್ಟಲು ಕೈದಿಗಳು ಕಾಲಿಗೆ ಸರಪಳಿ ಹಾಕಿದ್ದರು ಕಲ್ಲುಗಳನ್ನು ಹೊತ್ತರು, ಆದರೆ ಅದೇ ಕಟ್ಟಡದಲ್ಲಿ ಬೇರೆಯವರು ಸವಲತ್ತುಗಳನ್ನೂ ಅನುಭವಿಸುತ್ತಿದ್ದಾರೆ ಜೀವನವೇ ಹಾಗೆ ಎಂದು ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ಅವರ ಈ ಮಾತಿನ ಅರ್ಥ ಏನು ಎಂದು ಸಭೆಯಲ್ಲಿ ಕೆಲವರಿಗೆ ತಿಳಿಯಲಿಲ್ಲ. ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಡಿಕೆ ಶಿವಕುಮಾರ್ ಅವರ ಮಾತು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ ಅವರ ಮಾತಿನ ಒಳ ಅರ್ಥ ಏನು ? ಯಾರನ್ನು ಕುರಿತು ಅವರು ಈ ರೀತಿ ಮಾತನ್ನು ಅಡಿರಬಹುದು ಎಂದು ಎಂಬ ಅನೇಕ ಪ್ರಶ್ನೆಗಳು ಎದ್ದಿವೆ.