ಮೈಸೂರು : ಮನೆ ಮುಂಭಾಗ ನಿಲ್ಲಿಸಿದ್ದ ಕಾರಿನ ಚಕ್ರ ಕಳ್ಳತನ ಮಾಡಿರುವ ಘಟನೆ ಮೈಸೂರಿನ ಸರ್ದಾರ್ ವಲ್ಲಭಭಾಯಿ ನಗರದಲ್ಲಿ ನಡೆದಿದೆ.
ಸರ್ದಾರ್ ವಲ್ಲಭಾಯಿ ಪಟೇಲ್ ನಗರದ ಪೋಲೀಸ್ ಬಡಾವಣೆಯ 2ನೇ ಹಂತದಲ್ಲಿ ಈ ಘಟನೆ ಸಂಭವಿಸಿದೆ.
ಪೋಲೀಸ್ ಬಡಾವಣೆ ನಿವಾಸಿ ಕುಬೇರಸ್ವಾಮಿ ಎಂಬುವರಿಗೆ ಸೇರಿದ ಕಾರನ್ನು ತಡರಾತ್ರಿ ನಿಲ್ಲಿಸಿದ್ದ ವೇಳೆ ಕಾರಿನ ನಾಲ್ಕು ಚಕ್ರವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.