ಚಾಮರಾಜನಗರ : ಪ್ರಕೃತಿ ಜೊತೆ ನಿರಂತರ ಸಂಪರ್ಕ ಸಾಧಿಸಬೇಕಾದರೇ ಯೋಗ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ರಮೇಶ್ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾಡಳಿತವು ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಜೊತೆಗೂಡಿ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದ 9 ನೇ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಔಷಧಿಗಳು ಸರಿಪಡಿಸಲಾಗದ ಕಾಯಿಲೆಗಳನ್ನು ಯೋಗ ಗುಣಪಡಿಸಿದೆ, ಯೋಗ, ಧ್ಯಾನದ ಮೂಲಕ ಮಾನಸಿಕ ಶಾಂತಿ ಮಾತ್ರವಲ್ಲ- ಸಮಾಜದ ಶಾಂತಿಯನ್ನೂ ಕಾಪಾಡಬಹುದು ಎಂದು ಅಭಿಪ್ರಾಯಪಟ್ಟರು.
50ಕ್ಕೂ ಹೆಚ್ಚು ನುರಿತ ಯೋಗಪಟುಗಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶ್ವಾಸಕ್ರಿಯೆ, ಅರ್ಧ ಉಷ್ಟಾಸನ, ತ್ರಿಕೋನಾಸನ, ವಜ್ರಾಸನ, ವೀರಾಸನ,ತ್ರಿಕೋನಾಲಗಸನ, ಮಂಡೂಕಾಸನ, ಸೂರ್ಯ ನಮಸ್ಕಾರ ಸೇರಿದಂತೆ 2 ತಾಸು ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮಕ್ಕೆ ಶಾಸಕ ಪುಟ್ಟರಂಗಶೆಟ್ಟಿ, ನಗರಸಭೆ ಜನಪ್ರತಿನಿಧಿಗಳು ಗೈರಾಗಿದ್ದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಡಿಸಿ ಕಾತ್ಯಾಯಿನಿದೇವಿ, ನಗರಸಭೆ ಆಯುಕ್ತ ರಾಮದಾಸ್ ಆಯುಷ್ ಅಧಿಕಾರಿ ಸುಜಾತ, ಡಾಕ್ಟರ್ ಮಾನಸ ಎಲ್. ಡಾಕ್ಟರ್ ನಾಗೇಶ್ ಸೇರಿದಂತೆ ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.