ಹುಣಸೂರು: ಬೈಕ್ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳಬೂಚನಹಳ್ಳಿ ಬಳಿ ನಡೆದಿದೆ.
ಬಿ.ಆರ್.ಕಾವಲ್ ನಿವಾಸಿ ಉಮೇಶ್ (26) ಮೃತ ದುರ್ದೈವಿ. ಹೊಲದ ಶುಂಠಿ ಕೆಲಸಕ್ಕೆ ಕೂಲಿಕಾರರನ್ನು ಬರುವಂತೆ ಹೇಳಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಹುಣಸೂರು ಗ್ರಾಮಾಂತರದಲ್ಲಿ ಪ್ರಕರಣ ದಾಖಲಾಗಿದೆ