ಮೈಸೂರು : ಗೋದಾಮುಗಳಲ್ಲಿ ದಾಸ್ತಾನು ಇದ್ದರೂ ಒಕ್ಕೂಟ ಸರ್ಕಾರ ರಾಜ್ಯಕ್ಕೆ ಅಕ್ಕಿಯನ್ನು ಬಿಡುಗಡೆ ಮಾಡದೆ ದ್ವೇಷದ ರಾಜಕಾರಣ ಮಾಡಿ ಸಣ್ಣತನ ಪ್ರದರ್ಶಿಸಿದೆ,
ಮುಂದಿನ ದಿನಗಳಲ್ಲಿ ಬಿಜೆಪಿ ಇದರ ಪ್ರತಿಫಲವನ್ನು ರಾಜ್ಯದ ಜನರಿಂದ ಪಡೆಯುತ್ತದೆ ಎಂದು ಕರ್ನಾಟಕ ರಾಜ್ಯ ರೈತಸಂಘ ದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿಕಾರಿದರು
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ಅನ್ನಭಾಗ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಧಾನ್ಯವನ್ನು ನಮ್ಮ ರೈತರಿಂದಲೇ ಖರೀದಿಸಲಿ,
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಪ್ರತಿ ವ್ಯಕ್ತಿ 10ಕೆ.ಜಿ. ಅಕ್ಕಿ ಉಚಿತ ಕೊಡುವ ಅನ್ನಭಾಗ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಒದಗಿಸಲು ನಿರಾಕರಿಸಿರುವುದರಿಂದ ಹೊರ ರಾಜ್ಯಗಳಿಂದ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಿದೆ.
ಬೇರೆ ರಾಜ್ಯಗಳ ಮೇಲಿನ ಅವಲಂಬನೆಯನ್ನು ಬಿಟ್ಟು ನಮ್ಮ ರೈತರಿಂದಲೇ ಅಕ್ಕಿ ಖರೀದಿಸುವ ಯೋಜನೆಗೆ ಮುಂದಾಗಬೇಕು ಮತ್ತು ಅಕ್ಕಿಯ ಬದಲಿಗೆ ರಾಗಿ, ಮತ್ತು ಜೋಳವನ್ನು ಖರೀದಿಸಿ ಪಡಿತರ ವಿತರಣೆ ಮಾಡಬೇಕು,
ತಕ್ಷಣಕ್ಕೆ ಅಗತ್ಯವಿರುವಷ್ಟು ಪ್ರಮಾಣದ ರಾಗಿ ಮತ್ತು ಜೋಳ ಸಿಗದಿರಬಹುದು. ಈಗ ಮುಂಗಾರಿನ ಬಿತ್ತನೆಗೆ ರೈತರು ತಯಾರಿ ನಡೆಸುತ್ತಿದ್ದು, ವೆಚ್ಚದ ಮೇಲೆ ಶೇ.50ರಷ್ಟು ಲಾಭತರುವ ಸ್ವಾಮಿನಾಥನ್ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ಖರೀದಿಸುವ ಆಶ್ವಾಸನೆ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಧಾನ್ಯಗಳು ಖಂಡಿತ ದೊರೆಯತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮರಂಕಯ್ಯ, ಹೊಸಕೋಟೆ ಬಸವರಾಜು, ಪ್ರಸನ್ನ ಗೌಡ, ಚಾಮರಸ ಮಾಲೀ ಪಾಟೀಲ್, ಉಪಸ್ಥಿತರಿದ್ದರು .