ಮೈಸೂರು : ಕಳೆದ ಮೂರು ದಶಕಗಳಿಂದ ಪಕ್ಷಿ ವೀಕ್ಷಣೆ ಹವ್ಯಾಸದಲ್ಲಿ ತೊಡಗಿಕೊಂಡು ಗಿಡಮರಗಳ ಬಗ್ಗೆ ಮಕ್ಕಳು ಮತ್ತು ಆಸಕ್ತರಿಗೆ ಅರಿವು ಮೂಡಿಸುತ್ತಿರುವ ದಿನೇಶ್ ಕುಮಾರ್ ರವರು ಇಂದು ಬೆಳಗ್ಗೆ ಕುಕ್ಕರಹಳ್ಳಿ ಕೆರೆಯಲ್ಲಿ ಶಕ್ತಿಧಾಮ ವಿದ್ಯಾಶಾಲೆಯ ಮಕ್ಕಳಿಗೆ ಪಕ್ಷಿವೀಕ್ಷಣೆ ಬಗ್ಗೆ ಅರಿವು ಮೂಡಿಸಿದರು,
ಈ ಕಾರ್ಯಕ್ರಮದಲ್ಲಿ ಶಕ್ತಿಧಾಮ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ. ಗೀತಾ ಶಿವರಾಜ್ ಕುಮಾರ್ ರವರು ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿ ಮಕ್ಕಳೊಡನೆ ಸಮಾಲೋಚನೆ ನಡೆಸಿದರು
ಇದೆ ಸಂಧರ್ಭದಲ್ಲಿ ಪರಿಸರ ಪ್ರೇಮಿಗಳು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಸಾಹಿತಿ ಬನ್ನೂರು ಕೆ ರಾಜು ಅವರು ಉಪಸ್ಥಿತರಿದ್ದರು ..