ಮೈಸೂರು : ಬೆಂಗಳೂರು ಮೈಸೂರು ಹೈವೇ ಟೋಲ್ ದರ 22%ಹೆಚ್ಚಳ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಕಿಡಿ ಕಾರಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೈ-ಬೆಂಗಳೂರು ದಶಪಥ ಹೆದ್ದಾರಿ ಟೋಲ್ ದರವನ್ನ ಯಾರಿಗೂ ಗೊತ್ತಿಲ್ಲದಂತೆ ಹೆಚ್ಚಳ ಮಾಡಿದೆ.
ಇದು ಅನ್ಯಾಯದ ಪರಮಾವಧಿ.
ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳೆರಡು ಸೇರಿ ಜನರ ಮೇಲೆ ಮತ್ತಷ್ಟು ಭಾರ ಹೊರೆಸಿವೆ.
ಏಕಾಏಕಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 30ರಿಂದ 200ವರೆಗೆ ಟೋಲ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ,ಸಮರ್ಥನಿಯವು ಅಲ್ಲ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಿಸಿರುವುದು ಹೆದ್ದಾರಿಯ ಹಗಲು ದರೋಡೆ ಎಂದಿದ್ದಾರೆ.
ದಶಪಥ ಹೆದ್ದಾರಿಗೆ ಭೂಮಿ ಕೊಟ್ಟಿದ್ದು ಕರ್ನಾಟಕ ಸರ್ಕಾರ.ಇದ್ದ ನೆಲೆ ಕಳೆದುಕೊಂಡವರು ನಮ್ಮ ರೈತರು.
ಈಗ 20%ಸುಲಿಗೆಗೆ ಒಳಗಾಗುತ್ತಿರುವವರು ಕೂಡ ಕನ್ನಡಿಗರೇ.ಕನ್ನಡಿಗರನ್ನ ಕೊಳ್ಳೆ ಹೊಡೆಯುವ ದೂರ್ತ ನಡೆಗೆ ನಮ್ಮ ದಿಕ್ಕಾರ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನೇ ಅಧಿಕೃತ ವ್ಯವಹಾರ ಮಾಡಿಕೊಂಡಿವೆ.
ಇತ್ತ ರಾಜ್ಯ ಸರ್ಕಾರ ಗ್ಯಾರಂಟಿಗಳೆಂಬ ತುಪ್ಪ ಸವರಿ.
ಅದೇ ಗ್ಯಾರಂಟಿಗಳ ಮೂಲಕ ಮಣಭಾರ ಹೇರುತ್ತಿದೆ.
ಒಂದು ಕೈಯಲ್ಲಿ ಕೊಟ್ಟು ಎರಡು ಕೈಗಳಲ್ಲಿ ಬರೆ ಎಳೆಯುತ್ತಿದೆ ಎಂದರು.
ಹೆದ್ದಾರಿ ಪ್ರಾಧಿಕಾರ ಹೆಚ್ಚಳ ಮಾಡಿರುವ ಟೋಲ್ ದರವನ್ನ ಕೂಡಲೇ ವಾಪಾಸ್ ಪಡೆಯಬೇಕು.
ಹೆದ್ದಾರಿ ಪ್ರಾಧಿಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು.
ಜನ ರೊಚ್ಚಿಗೆಳುವ ಮುನ್ನ ಟೋಲ್ ದರ ಕಡಿಮೆ ಮಾಡಬೇಕು.
ಪ್ರತಿಪಕ್ಷವಿದ್ದಾಗ ಬೆಲೆ ಏರಿಕೆ ವಿರುದ್ಧ
ಆಡಳಿತ ಪಕ್ಷಕ್ಕೆ ಬಂದ ನಂತರ ಬೆಲೆ ಏರಿಕೆ ಪರ ನಿಂತರೆ ಜನ ತಕ್ಕ ಪಾಠ ಕಳಿಸುತ್ತಾರೆ.
ಬಿಜೆಪಿ ಸರ್ಕಾರದ ದಾರಿಯಲ್ಲೇ ರಾಜ್ಯ ಸರ್ಕಾರ ನಡೆಯುತ್ತಿದೆಯೇ ಎಂಬ ಅನುಮಾನ ಬರುತ್ತಿದೆ ಎಂದು
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆಗೆ ಮಾಜಿ ಸಿಎಂ ಹೆಚ್ ಡಿಕೆ ಗರಂ ಆದರು.