ಗೃಹಲಕ್ಷ್ಮಿ ಯೋಜನೆ ಹಣವನ್ನು ಅತ್ತೆಗೆ ಕೊಡ್ತೀರೋ, ಸೊಸೆಗೆ ಕೊಡ್ತೀರೋ ಎಂದು ಕೇಳ್ತಿದಾರೆ.
ಅತ್ತೆ ಯಜಮಾನಿಯಾಗಿದ್ರೇ ಅತ್ತೆಗೆ ಕೊಡ್ತೀವಿ, ಸೊಸೆ ಯನಮಾನಿಯಾಗಿದ್ರೇ ಸೊಸೆಗೆ ಕೊಡ್ತೀವಿ.
ತೆರಿಗೆ ಕಟ್ಟುತ್ತಿರುವವರನ್ನು ಹೊರತುಪಡಿಸಿ ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಕೊಡುತ್ತೇವೆ.
ಭಾಷಣ ವೇಳೆಯೂ ಮಾಧ್ಯಮಗಳತ್ತಲೇ ಮತ್ತೆ ಬೊಟ್ಟು ಮಾಡಿದ ಸಿಎಂ ಸಿದ್ದರಾಮಯ್ಯ.
ಮಾಧ್ಯಮಗಳಲ್ಲಿ ಅತ್ತೆಗೆ ಕೊಡ್ತಾರಾ, ಸೊಸೆಗೆ ಕೊಡ್ತಾರಾ ಎಂದು ಚರ್ಚೆ ಮಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ.
ಇದೇ ವೇಳೆ ಗೊಬ್ಬರದ ಬೆಲೆ ಕಡಿಮೆ ಮಾಡುವಂತೆ ಆಗ್ರಹಿಸಿದ ಓರ್ವ ವ್ಯಕ್ತಿ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ.
ಗೊಬ್ಬರದ ಬೆಲೆಯನ್ನು ಕೇಂದ್ರದವರು ಕಡಿಮೆ ಮಾಡಬೇಕು, ಮೋದಿ ಕಡಿಮೆ ಮಾಡಬೇಕು.
ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ಧಂತೆ ಪೆಟ್ರೋಲ್, ಡೀಸೆಲ್, ಗೊಬ್ಬರ ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆಯನ್ನು ಕಡಿಮೆ ಮಾಡುತ್ತೇವೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲೋದು ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಖಚಿತ.
ಬಿಜೆಪಿಯವರಿಗೆ ಈಗಲೇ ನಡುಕ ಆರಂಭವಾಗಿದೆ, ಸೋಲಿನ ಭೀತಿ ಆವರಿಸಿದೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ.
ಕಾಂಗ್ರೆಸ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು
ಗೃಹ ಲಕ್ಷ್ಮಿ ಯೋಜನೆ ಯಾರ್ ಯಜಮಾನಿ ಅವ್ರಿಗೆ ಕೊಡ್ತೀವಿ ಮಾಧ್ಯಮದವರತ್ತ ಬೊಟ್ಟು ಮಾಡಿದ ಸಿದ್ದರಾಮಯ್ಯ

Leave a comment
Leave a comment