ಎರಡು ಲಕ್ಷ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ KEB ಎಇಇ ಸಿಕ್ಕಿಬಿದ್ದಿದ್ದಾರೆ.
ಮೈಸೂರಿನ ಮನೆ ಸಮೀಪವೇ ಲಂಚ ಪಡೆಯುವ ವೇಳೆ ಟ್ರಾಪ್ ಆಗಿದ್ದು, ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ 49ಕೆವಿ ವಿದ್ಯುತ್ ಅನುಮತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
5 ಲಕ್ಷ ಬೇಡಿಕೆ ಇಟ್ಟು ಬಳಿಕ 2 ಲಕ್ಷಕ್ಕೆ ಡೀಲ್ ಓಕೆ ಮಾಡಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ಮಾಡಿದ್ದು ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಟ್ರಾಪ್ ಆಗಿದ್ದಾರೆ