ಮೈಸೂರು : ಕುವೆಂಪುನಗರ ಠಾಣಾ ಪೋಲೀಸರ ಮಿಂಚಿನ ಕಾರ್ಯಾಚರಣೆ.ಪ್ಯೂಮಾ ಶೋರೂಮ್ ನಲ್ಲಿ ಕಳ್ಳತನ ಪ್ರಕರಣ ಸಂಬಂದ ಕಳ್ಳತನ ಮಾಡಿದ್ದ ಆರೋಪಿ ಬಂಧನ.
ಪ್ರಜ್ವಲ್ (20)ವರ್ಷ ಬಂಧಿತ ಆರೋಪಿ.
ಪ್ಯೂಮಾ ಶೋರೂಮ್ ಶೆಟರ್ ಮುರಿದು ಶೋರೂಮ್ ನಲ್ಲಿದ್ದ ಹಣ ಮತ್ತು ಇನ್ನಿತರೆ ವಸ್ತುಗಳನ್ನ ದೋಚಿದ್ದ ಖದೀಮ.ಬಂಧಿತ ಆರೋಪಿ ಪ್ರಜ್ವಲ್ ತನ್ನ ಸ್ನೇಹಿತರಾದ ನಿತಿನ್,ಭಾಷಾ,ಚೇತನ್ ಜೊತೆ ಮೈಸೂರು,ಬೆಂಗಳೂರು,ಹೊಸಪೇಟೆ,ಅರಸೀಕೆರೆ ಸೇರಿದಂತೆ ಇತರೆ ಕಡೆ ಇದೆ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್,ಎರಡು ಮೊಬೈಲ್,5500ನಗದು ವಶ ಪಡಿಸಿಕೊಳ್ಳಲಾಗಿದೆ. ಕುವೆಂಪುನಗರ ಪೋಲೀಸರ ಕಾರ್ಯ ವೈಖರಿಗೆ ನಗರ ಪೋಲೀಸ್ ಆಯುಕ್ತ ಡಾ.ಬಿ.ರಮೇಶ್ ಮತ್ತು ಡಿಸಿಪಿ ಮುತ್ತುರಾಜ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.