ಮೈಸೂರು : ನಿರ್ಮಾಣ ಹಂತದ ಕಟ್ಟದ ಗುಂಡಿಯಲ್ಲಿ ಉದ್ಯಮಿ ಪುತ್ರನ ಶವ ದೊರೆತಿದೆ.ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಟೂಲ್ಸ್ ತಯಾರಿಸುವ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಚೆರಿಯನ್ ರವರ ಪುತ್ರ ಕ್ರಿಸ್ಟೋ ಚೆರಿಯನ್(35) ಮೃತ ದುರ್ದೈವಿ.
ವೈದ್ಯರೊಬ್ಬರಿಗೆ ಸೇರಿದ ನಿವೇಶನದಲ್ಲಿ ನಿರ್ಮಿಸುತ್ತಿರುವ ಕಟ್ಟಡದ ಗುಂಡಿಯಲ್ಲಿ ಶವ ಪತ್ತೆಯಾಗಿದೆ.ಬೆಳಿಗ್ಗೆ ವಾಕಿಂಗ್ ತೆರಳಿದ ಕ್ರಿಸ್ಟೋಫರ್ ಚೆರಿಯನ್ ಮೃತದೇಹ ಮಧ್ಯಾಹ್ನದ ವೇಳೆಗೆ ಗುಂಡಿಯಲ್ಲಿ ಪತ್ತೆಯಾಗಿದೆ.ಒಂದೂವರೆ ವರ್ಷದ ಹಿಂದೆ ಮರಿಯಾ ಎಂಬುವರನ್ನ ವಿವಾಹವಾಗಿದ್ದ ಕ್ರಿಸ್ಟೋಫರ್ ಚೆರಿಯನ್ ಒಂದು ಮಗುವಿನ ತಂದೆಯಾಗಿದ್ದರು.ಮೂರು ತಿಂಗಳ ಹಿಂದೆ ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಕಾಲು ಮುರಿದುಕೊಂಡು ವಿಶ್ರಾಂತಿಯಲ್ಲಿದ್ದರು.ಓಡಾಡಲು ಸಾಧ್ಯವಾಗದ ಹಿನ್ನಲೆ ಕ್ರಿಸ್ಟೋಫರ್ ಮಾನಸಿಕ ಖಿನ್ನತೆಗೂ ಒಳಗಾಗಿದ್ದರೆಂದು ಹೇಳಲಾಗಿದೆ. ಶನಿವಾರ ಸಂಜೆ ವಾಕಿಂಗ್ ತೆರಳಿದ ಕ್ರಿಸ್ಟೋಫರ್ ಮನೆಗೆ ಹಿಂದಿರುಗಿಲ್ಲ.ಭಾನುವಾರ ಮಧ್ಯಾಹ್ನ ಕ್ರಿಸ್ಟೋಫರ್ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿದೆ.
ಕ್ರಿಸ್ಟೋಫರ್ ಸಾವು ಆಕಸ್ಮಿಕವೋ ಕೊಲೆಯೋ ತನಿಖೆಯಲ್ಲಿ ಬಯಲಾಗಬೇಕಿದೆ.ಸಧ್ಯ ಮೃತನ ಪೋಷಕರು ಸೂಕ್ತ ತನಿಖೆ ನಡೆಸುವಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.