ಮೈಸೂರು : ಸಮಾಜದ ಸ್ವಾಸ್ಥ್ಯ ಕ್ಕಾಗಿ ಯುವ ಪೀಳಿಗೆಯಲ್ಲಿ ತಂಬಾಕು ಮತ್ತು ಅದರ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗ ಮೇ ೩೧ ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಮೇ ತಿಂಗಳು ಮೈಸೂರಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆ. ಈ ಬಾರಿಯೂ ಮೇ ೩೧ ರಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ತಂಬಾಕುಮುಕ್ತ ಸಮಾಜಕ್ಕೆ ಜಾಥಾವನ್ನು ಏರ್ಪಡಿಸಲಾಗಿದೆ ಎಂದು ಬಿಎಚ್ಐಒ ಆಸ್ಪತ್ರೆ ನಿರ್ದೇಶಕಿ ಅಂಜಲಿ ಅಜಯ್ ಕುಮಾರ್ ತಿಳಿಸಿದರು
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ತಂಬಾಕು ಸೇವನೆ ಮತ್ತು ಉತ್ಪಾದನೆಯಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ.
ತಂಬಾಕು ಸೇವನೆ ವ್ಯಸನಕಾರಿಯಾಗಿದ್ದು, ತಂಬಾಕಿನಲ್ಲಿನ ನಿಕೋಟಿನ್ ಎಂಬುವ ಅಂಶ ಉತ್ತೇಜಕದಂತೆ ಕೆಲಸ ಮಾಡುತ್ತದೆ ಮತ್ತು ಮನುಷ್ಯರನ್ನು ಅದರ ದಾಸರನ್ನಾಗಿಸುತ್ತದೆ. ತಂಬಾಕಿನಲ್ಲಿ ಸುಮಾರು 7000 ರಾಸಾಯನಿಕ ಅಂಶಗಳಿದ್ದು, ಅದರಲ್ಲಿನ 70 ರಷ್ಟು ಅಂಶಗಳು ಕ್ಯಾನ್ಸರ್‌ಕಾರಗಳಾಗಿವೆ.
ಈ ನಿಟ್ಟಿನಲ್ಲಿ ಮೇ ೩೧ ರಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ತಂಬಾಕು ಮುಕ್ತ ಸಮಾಜಕ್ಕೆ ಜಾಥಾವನ್ನು ಏರ್ಪಡಿಸಲಾಗಿದೆ ಈಅಭಿಯಾನದಲ್ಲಿ ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಪುಷ್ಟಿ ತುಂಬಬೇಕೆಂದು ಮನವಿ ಮಾಡಿದರು
ಸುದ್ದಿಗೋಷ್ಟಿಯಲ್ಲಿ ಡಾ. ರಕ್ಷಿತ್ ಶೃಂಗೇರಿ,ಡಾ. ವಿನಯ್ ಕುಮಾರ್, ಡಾ.ವೈ.ಎಸ್ ಮಾದವಿ, ಡಾ.ಅಭಿಲಾಷ್ , ನಿರ್ಮಲಾ ಮೂರ್ತಿ ಉಪಸ್ಥಿತರಿದ್ದರು