ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ಬಿಡುವುದಿಲ್ಲ ಎಂದು ಪೊಲೀಸ್ ಇಲಾಖೆ ಸಭೆಯಲ್ಲಿ ಎಚ್ಚರಿಕೆ ನೀಡಿದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಶಾಸಕ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ, ಭಾರತದ ತ್ರಿವರ್ಣ ಧ್ವಜ ಕೇಸರಿಯಿಂಧ ಶುರುವಾಗುತ್ತದೆ. ರಾಷ್ಟ್ರೀಯತೆ ಹಾಗೂ ಹನುಮನ ಸಂಕೇತ ಕೇಸರಿ. ಇಂತಹ ಕೇಸರಿ ಬಗ್ಗೆ ಕಾಂಗ್ರೆಸ್ ನವರಿಗೆ ಯಾಕೆ ಕೋಪ ? ಕಾಂಗ್ರೆಸ್ ನವರಿಗೆ ಕೇಸರಿ ಮೇಲೆ ಏಕೆ ಕೋಪವೋ ಗೊತ್ತಿಲ್ಲ ಗರಂ ಆದರು.
ಅಲ್ಲದೆ ಕಾಂಗ್ರೆಸ್ ನವರು ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದೇವೆಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಗೆ ಲೋಕಸಭೆಯಲ್ಲಿ ಜನ ತಕ್ಕ ಉತ್ತರ ಕೊಡಿತ್ತಾರೆ ಕಾದು ನೋಡಿ ಎಂದು ಎಚ್ಚರಿಕೆ ನೀಡಿದರು.