ಮೈಸೂರು : ಉತ್ತನಹಳ್ಳಿಯ ಹೋಗುವ ಮಾರ್ಗದಲ್ಲಿ. ಕೆಳಗಡೆ ತಿರುಗಿದರೆ ಲಿಟ್ಲ್ ಗ್ಯಾಸ್ ಕಂಪನಿಯ ಗೋಡೌನ್ ಇದೆ ಬಂಡಿಪಾಳ್ಯ ಗೌರಿಶಂಕರನಗರ ಜೆಪಿ ನಗರ ಮುಂತಾದ ಕಡೆಯಿಂದ ಕಸ ಸಂಗ್ರಹಿಸಿ ತಂದು ಕಾಡುಗಳಲ್ಲಿ ಸುರಿಯುತ್ತಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಕಾಡುಗಳಲ್ಲಿ ಸರ್ವೆ ನಡೆಸಿ ಅರಣ್ಯ ಇಲಾಖೆಯವರು ಮೀಸಲು ಅರಣ್ಯ ಎಂದು ಮಾಡಿದ್ದಾರೆ. ಫೆನ್ಸಿಂಗ್ ಹೊರಗಡೆ ಕುಡಿದ ಬಾಟಲಿಗಳು ಸತ್ತವರ ಹಾಸಿಗೆ ಬಟ್ಟೆಗಳು. ಬೀದಿಯಲ್ಲಿ ಸತ್ತ ನಾಯಿಗಳು. ಸತ್ತ ನಾಯಿ ಪ್ರಾಣಿಗಳ ಕೊಳೆತ ದೇಹಗಳು. ಸುತ್ತಮುತ್ತ ಇರುವ ಮಾಂಸದ ಅಂಗಡಿಗಳಲ್ಲಿ ಬರುವ ತ್ಯಾಜ್ಯಗಳು. ಹೀಗೆ ಮೈಸೂರಿನಲ್ಲಿರುವ ಕಸದ ರಾಶಿಗಳ ಕಾಡುಗಳಲ್ಲಿ ಕಾಣಿಸುತ್ತದೆ.
ಸ್ಥಳೀಯರು ಹಾಗೂ ಮುಂದೆ ಇರುವ ಎಪಿಎಂಸಿ ಯಾರ್ಡ್ ನಲ್ಲಿ ಕೊಳೆತ ಈರುಳ್ಳಿ ತರಕಾರಿ ಪದಾರ್ಥಗಳು ತಂದು ಡಂಪ್ ಮಾಡುತ್ತಾರೆ. ಫಾಸ್ಟ್ ಫುಡ್ ಗಾಡಿ ಅವರು ವಿಗ್ರಹಾರ ಪದಾರ್ಥಗಳನ್ನು ತಂದು ಅಲ್ಲೇ ಕಾಡಿನಲ್ಲಿ ಸುರಿಯುತ್ತಾರೆ.ಇರುವ ಮೇಯರ್ ಶಿವಕುಮಾರ್ ರವರಿಗೆ ಹಾಗೂ ಪ್ರತಾಪ ಸಿಂಹ ರವರಿಗೆ ಪತ್ರಿಕೆಯ ಛಾಯಾಗ್ರಹಕ ವಿಷಯ ತಿಳಿಸಿದ್ದಾರೆ ಒಂದು ವಾರದಲ್ಲಿ ಅದನ್ನು ತೆರೆವು ಉಳಿಸಿ ಫೆನ್ಸಿಂಗ್ ಹಾಕಿಸುತ್ತೇನೆ ಎಂದರು.
ಇಲ್ಲಿಯವರೆಗೆ ಯಾವುದೇ ರೀತಿಯ ಸ್ವಚ್ಛ ಮಾಡಿಲ್ಲ.
ಮೊನ್ನೆ ಬಿರು ಬೇಸಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹತ್ತಿಸಿ. ತ್ಯಾಜ್ಯಗಳೆಲ್ಲ ಉರಿಯುತ್ತಿತ್ತು.
ತಕ್ಷಣ ಅಗ್ನಿಶಾಮಕ ಸಿಬ್ಬಂದಿಯವರು ಬಂದು ಬೆಂಕಿ ನಂದಿಸಿದರು. ಚಿತ್ರದಲ್ಲಿ ಕಾಣಬಹುದು.
ಇತ್ತೀಚಿಗೆ ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿಗಳು ಕಾಣ ಬರುತ್ತಿವೆ. MRP ಔಟ್ಲೆಟ್ ಗಳಲ್ಲಿ ಮಧ್ಯಗಳನ್ನು ತೆಗೆದುಕೊಂಡು ಕಾರಿನಲ್ಲಿ ಕುಳಿತು ಕುಡಿದು ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಿದ್ದಾರೆ.
ಬೇಕಾದರೆ ಸಂಬಂಧಪಟ್ಟವರು ಎಲ್ಲಾ ಬಡಾವಣೆಗಳ ಮುಖ್ಯ ರಸ್ತೆಗಳನ್ನು ನೋಡಿದರೆ ಗೊತ್ತಾಗುತ್ತದೆ ಬಾಟಲಿಗಳು ಕಸದ ರಾಶಿಗಳು ಬಿದ್ದಿರುವುದು.
ಸ್ಥಳೀಯರೊಬ್ಬರು ಪತ್ರಿಕೆಗೆ ತಿಳಿಸದಿದ್ದರೆ ಯಾರಿಗೂ ತಿಳಿಯುವುದಿಲ್ಲ ಈ ಜಾಗ ಇದು ಯಾವ ಗ್ರಾಮ ಪಂಚಾಯಿತಿಗೆ ಸೇರುತ್ತದೆ ಎಂಬುದು ಸಹ ತಿಳಿದಿಲ್ಲ
ಹೀಗೆ ಆದರೆ ಇದು ಮತ್ತೊಂದು ಜೆಪಿ ನಗರ ಪ್ಲಾಂಟ್ ಆಗುವುದರಲ್ಲಿ ಸಂಶಯವಿಲ್ಲ.
ಸಂಬಂಧಪಟ್ಟ ನಗರಪಾಲಿಕೆಯವರು ಕೂಡಲೇ ಕ್ರಮ ಜರುಗಿಸಿ ಕಸ ತೆರವು ಮಾಡಿಸಿ ಆ ಜಾಗಕ್ಕೆ ಫೆನ್ಸಿಂಗ್ ಹಾಕಬೇಕೆಂದು ಅಲ್ಲಿ ಸ್ಥಳೀಯರ ಮನವಿ ಮಾಡಿದ್ದಾರೆ
ಇನ್ನೇನು ಮಳೆಗಾಲ ಪ್ರಾರಂಭವಾಗುತ್ತಿದೆ ಅಲ್ಲಿರುವ ತ್ಯಾಜ್ಯಗಳ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ಓಡಾಡುವ ಜನಗಳು ಹಾಗೂ ಹೊಸಂಡಿ ಜನತೆಯ ಭಯವಾಗಿದೆಹಾಗೂ ಕಸ ಆಯುವರು ಎಲ್ಲಾ ಬಾಟಲಿಗಳನ್ನು. ತಂದು ಪ್ರತಿನಿತ್ಯ ಅಲ್ಲಿ ಶೇಖರಣೆ ಮಾಡುತ್ತಿದ್ದಾರೆ ರಾತ್ರಿಯಾದೊಡನೆ ಅಲ್ಲಿ ಅನೈತಿಕ ಚಟುವಟಿಗಳ ತಾಣವಾಗಿದೆ.
ಹೊಸಗುಂಡಿ ಗ್ರಾಮಕ್ಕೆ ಓಡಾಡುವವರಿಗೆ ಅಲ್ಲಿ ವಿಪರೀತ ಭಯ ಕಾಡುತ್ತಿವೆ ರಾತ್ರಿಯಾದೊಡನೆ ಅಲ್ಲಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಹೆಂಗಸರು ಮಕ್ಕಳು ಸಂಸಾರ ಸಮೇತ ಓಡಾಡಲು ಬಲು ಕಷ್ಟ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು