ಬೆಂಗಳೂರು : ರಾಜ್ಯ ವಿಧಾನ ಸಭಾ ಚುನವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಕಾಂಗ್ರೆಸ್ ಪಕ್ಷ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರನ್ನು ಆಯ್ಕೆಯಾಗಿದ್ದು ಈಗ ಸ್ಪೀಕರ್ ಸ್ಥಾನಕ್ಕೆ ಖಾದರ್ ಆಯ್ಕೆ ಮಾಡಲು ನಿರ್ಧರಿಸಿದೆ
ಸ್ಪೀಕರ್ ಆಗಲೂ ಹಿರಿಯ ನಾಯಕರಾದ ಹೆಚ್.ಕೆ ಪಾಟೀಲ್ ಜಯಚಂದ್ರ ಸೇರಿದಂತೆ ಯಾರು ಒಪ್ಪದ ಕಾರಣ ಹಂಗಾಮಿ ಸ್ಪೀಕರ್ ಆಗಿ ಆರ್.ವಿ ದೇಶಪಾಂಡೆಯನ್ನು ಆಯ್ಕೆ ಮಾಡಲಾಗಿತ್ತು. ದೇಶಪಾಂಡೆ ಕೂಡ ನಾನು ಸ್ಪೀಕರ್ ಆಗಲ್ಲ ಸಚಿವನಾಗುವ ಆಸೆ ವ್ಯಕ್ತ ಪಡಿಸಿದ್ದರು.
ಇದೀಗ ತಡರಾತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಸ್ಲಿಂ ಸಮುದಾಯದ ಯುಟಿ ಖಾದರ್ ಅವರನ್ನು ಸ್ಪೀಕರ್ ಮಾಡಲು ಸಭೆ ನಡೆಸಿದ್ದಾರೆ. ಅಲ್ಲದೆ ಖಾದರ್ ಅವರನ್ನು ಸಿದ್ದರಾಮಯ್ಯ ಸ್ಪೀಕರ್ ಆಗುವಂತೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಖಾದರ್ ಸ್ಪೀಕರ್ ಆದರೆ ಕರ್ನಾಟಕ ಮೊದಲ ಮುಸ್ಲಿಂ ನಾಯಕ ಸ್ಪೀಕರ್ ಅದ ದಾಖಲೆಗೆ ಖಾದರ್ ಪಾತ್ರರಾಗಿದ್ದಾರೆ