ಮೈಸೂರು : ನನಗೆ ಪಕ್ಷವೇ ದೇವರು, ಪಕ್ಷವೇ ತಾಯಿ.
ನನಗೆ ತಿಕ್ಕಲು ಹತ್ತಿದ್ರೆ ಪಕ್ಷವೂ ಬೇಡಾ ಎಂದು ಹೋಗ್ತಾ ಇರುತ್ತೇನೆ.
ಎಸ್ ಎಂ ಕೃಷ್ಣ ಅವರ ವಿರುದ್ಧ ಜಗಳವಾಡಿಕೊಂಡು ಪಕ್ಷೇತರನಾಗಿ ನಿಂತುಕೊಂಡು ಗೆದ್ದೆ.
ನಾನು ಯಾವತ್ತೂ ನನ್ನ ಮಕ್ಕಳನ್ನು ರಾಜಕೀಯಕ್ಕೆ ತರಬೇಕು ಎಂದುಕೊಂಡವನಲ್ಲ.
ನಾನು ತಪ್ಪು ಮಾಡಿದ್ರೇ ನಾನು ಒಪ್ಪಿಕೊಳ್ಳುತ್ತೇನೆ.
ನನಗಿಂತ ದೊಡ್ಡವನು ತಪ್ಪು ಮಾಡಿದ್ರೂ, ಅದು ನೀನೇ ಎಂದು ನಾನು ಹೇಳ್ತೀನಿ.
ವರುಣದಲ್ಲಿ ಯಾರಿಗಾದರೂ ತೊಂದರೆ ಕೊಟ್ಟರೆ ಸೋಮಣ್ಣ ಇದ್ದಾನೆ.
ಬೆಂಗಳೂರಿನಲ್ಲಿ ನನ್ನೇ ಆದ ಕೋಟೆ ಕಟ್ಟಿದ್ದೇನೆ.
ನಾನು ನನ್ನ ದುಡಿಮೆಯಲ್ಲಿ ಬೆಳೆದಿದ್ದೇನೆ.
ಯಾಕೆ ನನ್ನ ಇಲ್ಲಿಗೆ ಕರೆಸಿದ್ರೋ ಗೊತ್ತಿಲ್ಲ.
ಚಿನ್ನದಂತ ನನ್ನ ಕ್ಷೇತ್ರದ ಜನ ಬೀದಿಯಲ್ಲಿ ಅನಾಥರಾಗಿ ಕಣ್ಣೀರು ಸುರಿಸುತ್ತಿದ್ದಾರೆ.
ಅಂಗವಿಕಲರಿಗೆ ಮಾಡಿದ್ಧ ಜಿಮ್‌ಗೆ ಬೀಗ ಹಾಕಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಶಿವರಾಜಕುಮಾರ್, ಅವನ್ ಯಾವನೋ ಲೂಸ್ ಮಾದ, ಅವನ್ ಯಾವನೋ ದುನಿಯಾ ವಿಜಿಯನ್ನು ಕರೆತಂದರು.
ಸಿದ್ದರಾಮಯ್ಯ ಅವರ ಇಡೀ ಜೀವನದಲ್ಲಿ ಖರ್ಚು ಮಾಡಿದ್ದನ್ನು ಈ ಬಾರಿಯ ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ.
ಸಿದ್ದರಾಮಯ್ಯಗೆ ಯಾರು ಯಾರು ಫಂಡ್ ಮಾಡಿದ್ದಾರೆ ಎಂದು ಗೋತ್ತು.
ನಾನು ದಡ್ಡನಲ್ಲ, ದಡ್ಡನ ತರಹ ನಡೆದುಕೊಳ್ಳುವ ಬುದ್ಧಿವಂತ.
ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದವನು.
ನನ್ನ ಸೋದರ ಮಾವ ನಿಜಲಿಂಗಪ್ಪನ ಅಳಿಯ.
ನಾನು ನನ್ನ ಅಮ್ಮ ಮಾವನ ಮನೆಗೆ ಹೋದಾಗ ಇವನನ್ನು ಯಾಕೆ ಕರೆದುಕೊಂಡು ಬಂದೆ ಎಂದು ಬೈದರು.
ನಮ್ಮಮ್ಮ ನನಗೆ 25 ರೂಪಾಯಿ ನೀಡಿ ಇವನ ಮನೆಗೆ ಇನ್ಯಾವತ್ತೂ ಹೋಗಬೇಡ.
ನಿಮ್ಮಪ್ಪನ ಹೆಸರು ಉಳಿಸಿ ಬೆಳೆಯಬೇಕು ಎಂದರು.
ನಾನು ಸಚಿವನಾದ ಮೇಲೆ ನಮ್ಮ ಮಾವ ನನ್ನ ಮನೆಗೆ ಬಂದ.
ಒಳ್ಳೆಯವರಿಗೆ ಯಾರು ಅನ್ಯಾಯ ಮಾಡಬೇಡಿ.
ಒಳ್ಳೆಯವರನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಅವರನ್ನೇ ತಿಂದುಬಿಡುತ್ತೇ.
ಅಶೋಕ ಮನೆಗೆ ಬಂದು ನನ್ನ ತರ ನಿಲ್ಲಬೇಕು ಎಂದ.
ನಾನು ಅಶೋಕ, ನಾನು ಅಶೋಕ ಅಲ್ಲ, ಸೋಮಣ್ಣ ಎಂದೆ.
ಪ್ರವಾಹದ ವಿರುದ್ಧ ಈಜಲು ಪಕ್ಷ ಹೇಳಿದೆ, ಅದಕ್ಕೇ ನಿಂತೆ ಅಂದೆ.
ಮೈಸೂರಿನಲ್ಲಿ ನನ್ನ ಹಾಗೆಯೇ ಮಾತಾಡೋರು ಕಡಿಮೆ.
ಜೋರಾಗಿ ಮಾತಾಡೋರನ್ನು ಬಾಯಿ ಮುಚ್ಚಿಸುತ್ತಾರೆ.
ಇನ್ನೊಮ್ಮೆ ಈ ರೀತಿಯ ಅವಕಾಶ ಚೆಲ್ಲಬೇಡಿ.
ಎಲ್ಲರೂ ಪಕ್ಷ ಕಟ್ಟಿ, ಪಕ್ಷ ಹೇಳಿದ ಮಾತು ಕೇಳಿ.
ಅವಶ್ಯಕತೆ ಇದ್ದವರಿಗೆ ಜಾತಿ ನೋಡದೇ, ಯಾರ ಫಾಲೋಹರ್ ಎಂದು ನೋಡದೇ ಗುರುತಿಸಿ.
ಇಲ್ಲಿ ಯಾರ್ ಯಾರ್ ವಾಟ್ಸ್ ಆ್ಯಫ್ ಮಾಡ್ತಾರೆ ಗೊತ್ತಿಲ್ಲ.
ಎಲೆಕ್ಟ್ರಾನಿಕ್ ಯುಗದಲ್ಲಿ ಹುಷಾರಾಗಿರಬೇಕು.
ಡಬ್ಬಲ್ ಸ್ಟೇರಿಂಗ್ ಸರ್ಕಾರ ಒಳ್ಳೆಯ ಕೆಸಲ ಮಾಡಿದ್ರೇ ಬೆನ್ನು ತಟ್ಟೋಣ.
ಅವರ ಭಾಗ್ಯ ಏನು ಮಾಡುತ್ತೋ ಏನೋ ಗೊತ್ತಿಲ್ಲ.
ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಸಾಹೇಬರು ವರ್ಣರಂಜಿತವಾಗಿ ಮಾಡಬೇಕು ಎಂದುಕೊಂಡಿದ್ದಾರೆ.
ಏನು ಮಾಡ್ತಾರೋ ನೋಡೋಣ.
ವರುಣ ಬಿಜೆಪಿ ಕೃತಜ್ಞತಾ ಸಭೆಯಲ್ಲಿ ವಿ ಸೋಮಣ್ಣ ಹೇಳಿಕೆ.
ನನಗೆ ತಿಕ್ಕಲು ಹತ್ತಿದ್ರೆ ಪಕ್ಷವೂ ಬೇಡ ಎಂದು ಹೋಗ್ತಾ ಇರುತ್ತೇನೆ – ಸೋಮಣ್ಣ
Leave a comment
Leave a comment