ದೆಹಲಿ : ನನಗೆ ಹೆಚ್ಚು ಶಾಸಕರ ಬೆಂಬಲವಿದೆ ರಾಜ್ಯದ ಜನರ ಬೆಂಬಲುವು ನನ್ನ ಮೇಲಿದೆ ಹಾಗಾಗಿ ನನಗೆ ಸಿಎಂ ಸ್ಥಾನ ಸಿಗಬೇಕು ಇಲ್ಲದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ನೀವು ಏನಾದ್ರೂ ಮಾಡ್ಕೊಳಿ ಎಂಬ ಖಡಕ್ ಸಂದೇಶ ಸಿದ್ದರಾಮಯ್ಯ ಹೈ ಕಮಾಂಡ್ ಮುಂದೆ ಇಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ
ಒಂದು ಕಡೆ ಡಿಕೆ ಶಿವಕುಮಾರ್ ತಮ್ಮ ಪಟ್ಟು ಸಡಿಲಿಸುತ್ತಿಲ್ಲ ಇನ್ನೊಂದು ಕಡೆ ಸಿದ್ದರಾಮಯ್ಯ ಕೂಡ ನಾನೇ ಸಿಎಂ ಆಗ್ಬೇಕು ಎಂದು ದೆಹಲಿಯಲ್ಲಿ ಬಿಡು ಬಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಸಂಕಷ್ಟದ ಸಮಯದಿಂದ ಪಕ್ಷವನ್ನು ಕಟ್ಟಿದ್ದೇನೆ ಈ ಬಾರಿ ಕಾಂಗ್ರೆಸ್ ಸರ್ಕಾರ ಬರಲು ನಾನು ಕಾರಣ ನನಗೆ ಸಿಎಂ ಬಿಟ್ಟರೆ ಯಾವ ಖಾತೆಯು ಬೇಡ ಎಂದು ಡಿಕೆಶಿ ಖರ್ಗೆ ಮುಂದೆ ವಾದ ಮಂಡಿಸಿದ್ದಾರೆ
ಇಬ್ಬರ ತಿಕ್ಕಾಟದಲ್ಲಿ ಹೈ ಕಮಾಂಡ್ ಯಾರ ಪರ ನಿಲ್ಲುವುದು ಎಂಬ ಆತಂಕದಲ್ಲಿದೆ. ಮುಂದಿನ ವರ್ಷ ಲೋಕ ಸಭಾ ಚುನಾವಣೆ ಇದೇ. ಸಿದ್ದರಾಮಯ್ಯ ಹೆದುರು ಹಾಕಿಕೊಂಡರೆ ಅಹಿಂದ ಮತಗಳು ಹೋಗುತ್ತೆ, ಡಿಕೆಶಿ ಹೆದುರು ಹಾಕಿಕೊಂಡರೆ ಗೌಡ ಲಿಂಗಾಯತ ಮತಗಳು ಬರಲ್ಲ ಹೀಗಾಗಿ ಹೈ ಕಮಾಂಡ್ ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದ್ದು ಇಂದು ನಾಳೆ ತಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.