ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಇಬ್ಬರ ಪರವಾಗಿಯೂ ಹೊರಗಡೆ ಕೂಗು ಕೇಳಿ ಬರುತ್ತಿದೆ. ಹೀಗಿರುವಾಗ, ಡಿ.ಕೆ.ಶಿವಕುಮಾರ್ ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಲಿಂಗಾಯತ ಮಠಾಧೀಶರ ಧರ್ಮ ಪರಿಷತ್ ಆಗ್ರಹಿಸಿ ಪತ್ರ ಬರೆದಿದೆ.
ಈ ಬಾರಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿ.ಕೆ.ಶಿವಕುಮಾರ್ ಅವರಿಗೇ ಸಿಎಂ ಸ್ಥಾನ ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶ್ರೀಶೈಲ, ಉಜ್ಜೈನಿ, ಕಾಶಿ ಸೇರಿದಂತೆ ಹತ್ತು ಮಠಗಳ ಮಠಾದೀಶರು ಪತ್ರ ಬರೆದಿದ್ದಾರೆ. ಶ್ರೀಶೈಲ, ಉಜ್ಜೈನಿ, ಕಾಶಿ ಸೇರಿದಂತೆ ಹತ್ತು ಮಠಗಳ ಮಠಾದೀಶರು ಪತ್ರ ಬರೆದು ಡಿಕೆ ಶಿವಕುಮಾರ್ ಬೆನ್ನಿಗೆ ನಿಂತಿದ್ದಾರೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಸಾಧಿಸಲು ಡಿ.ಕೆ.ಶಿವಕುಮಾರ್ ತುಂಬಾ ಪರಿಶ್ರಮ ಹಾಕಿದ್ದಾರೆ. ಚತುರತೆಯಿಂದ ಪಕ್ಷ ಸಂಘಟನೆ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ. ಕಾರ್ಯಕರ್ತರಲ್ಲಿ ಹುರುಪು ತುಂಬಿ ಕೆಲಸ ಮಾಡಿದರು. ಪಕ್ಷಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ ಅವರನ್ನು ಸಿಎಂ ಎಂದು ಘೋಷಿಸಬೇಕು ಎಂದು ಮಠಾಧೀಶರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಪಕ್ಷದಲ್ಲಿ ಹಿರಿಯ ನಾಯಕರು. ಕರ್ನಾಟಕದ ಜನಪ್ರಿಯ ನಾಯಕರಾಗಿರುವ ಅವರು ಈಗಾಗಲೇ ಒಂದು ಬಾರಿ ಸಿಎಂ ಆಗಿ ಪೂರ್ಣಾವಧಿ ಆಡಳಿತ ನಡೆಸಿದ್ದಾರೆ. 2018 ರಲ್ಲು ಅವರಿಗೆ ಅಧಿಕಾರಕ್ಕೆ ತರಲು ಅವಕಾಶ ಕೊಟ್ಟಿದ್ರಿ,, ಅವರು ಪಕ್ಷ ಅಧಿಕಾರಕ್ಕೆ ತರಲು ಆಗಲಿಲ್ಲ. ಈಗ ಅವರು ಪಕ್ಷದ ಇತರೆ ನಾಯಕರಿಗೆ ಮಾರ್ಗದರ್ಶನ ಮಾಡಬೇಕು. ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಗೆ ಕೊಡಿ ಎಂದು ಸಿದ್ದರಾಮಯ್ಯ ಅವರೇ ಹೇಳಿಬೇಕು ಅದನ್ನು ಬಿಟ್ಟು ಹಠ ಮಾಡುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.