ಮೈಸೂರು : ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರವಾಗಿ ಚಲನಚಿತ್ರ ನಟರಾದ ವಸಿಷ್ಠ ಹಾಗೂ ಹರಿಪ್ರಿಯಾ ದಂಪತಿ ಮತಯಾಚನೆ ಮಾಡಿದ್ದಾರೆ.
ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ್ದ ಜನಪ್ರಿಯ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ರವರನ್ನ ಭೇಟಿ ಮಾಡಿದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಟಿಎಸ್. ಶ್ರೀವತ್ಸ ರವರ ಪರವಾಗಿ ಮತಯಾಚನೆ ಮಾಡಿದರು,
ಇದೇ ಸಂಧರ್ಭದಲ್ಲಿ ಕಂಚಿನಕಂಠದ ಗಾಯಕ ಚಿತ್ರ ನಟ ವಸಿಷ್ಠ ಸಿಂಹ ರವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು, 18ವರ್ಷದ ಮೇಲ್ಪಟ್ಟ ಯುವಸಮೂಹ ಮೊದಲಭಾರಿ ಮತಚಾಲಾಯಿಸಲು ತೋರುತ್ತಿರುವ ಉತ್ಸಾಹ ನೋಡಿದರೇ ಖುಷಿಯಾಗುತ್ತದೆ, ಹಾಗೆಯೇ ಮನೆಮಂದಿಯೆಲ್ಲರೂ ಮತದಾನದಲ್ಲಿ ಭಾಗವಹಿಸುವಂತೆ ಜನಸಾಮನ್ಯಾರು ಮುಂದಾಗಬೇಕು, 80ವರ್ಷ ಮೇಲ್ಪಟ್ಟವರು ಮನೆಯಲ್ಲಿಯೇ ಮತಚಾಲಾಯಿಸುವ ವ್ಯವಸ್ಥೆ ಜಾರಿಗೆ ತಂದಿರುವ ಚುನಾವಣಾ ಆಯೋಗ ಶ್ಲಾಘನೀಯವಾದ ಕೆಲಸ ಕೈಗೊಂಡಿದೆ, ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು, ಚುನಾವಣೆಯ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸುವ ಆರಕ್ಷಕರಿಗೆ ಶಿಕ್ಷಕರಿಗೆ ಮತಚಲಾಯಿಸಲು ನೀಡಿರುವ ಅಂಚೆ ಮತದಾನ ಪ್ರಕ್ರಿಯೆ ಮಾದರಿಯಲ್ಲೇ ಮುಂದಿನ ದಿನದಲ್ಲಿ ರಾಜ್ಯದ ವಿವಿಧೆಡೆ ಕೆಲಸ ಮಾಡುವ ಪತ್ರಿಕಾರಂಗ, ದೃಶ್ಯ ಮಾಧ್ಯಮದ ವರದಿಗಾರರು ಛಾಯಾಗ್ರಾಹಕರು ರಾಜ್ಯದ ಸಾವಿರಾರು ಪತ್ರಕರ್ತರಿಗೂ ಸಹ ಅಂಚೆ ಮತದಾನ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದರು..
ಇದೇ ಸಂಧರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಜೋಗಿ ಮಂಜು, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಲಿಂಗರಾಜು, ಶರತ್ ಭಂಡಾರಿ, ಗುರುಪ್ರಸಾದ್, ಕುಮಾರ್, ಕಾರ್ತಿಕ್, ಆಶೃತ್, ಇದ್ದರು