ಮೈಸೂರು: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಾಕಷ್ಟು ಅನುಕೂಲತೆಗಳಿವೆ. ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ ಎಂದು ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸ ಹೇಳಿದರು.
ನಗರದ ಕುವೆಂಪು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಟಿ ಎಸ್ ಶಿವತ್ಸರವರು ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯಕರ್ತರು ಪಣತೊಟ್ಟು ಮನೆಮನೆಗೂ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಾಮಾಣಿಕ ಕಾರ್ಯಕರ್ತರ ಪ್ರೀತಿಗೆ ಚಿರಋಣಿ.ಕೇಂದ್ರದಿಂದ ಬಿಡುಗಡೆ ಆಗುವ ಪ್ರತಿಯೊಂದು ಪೈಸೆ ಹಣವೂ ನಿರ್ದಿಷ್ಟ ಫಲಾನುಭವಿಯನ್ನು ತಲುಪಲು ಹಾಗೂ ನಿರ್ದಿಷ್ಟ ಯೋಜನೆಗೆ ಬಳಕೆ ಯಾಗಲು ಡಬಲ್ ಎಂಜಿನ್ ಸರ್ಕಾರ ಮುಖ್ಯ. ನಾಲ್ಕು ವರ್ಷಗಳ ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಇದು ಸಾಬೀತಾಗಿದೆ ಎಂದರು.
ಯೋಜನೆಗಳ ಜಾರಿ ಪರಿಣಾಮ ಸಾಮಾನ್ಯ ಜನರ ಬದುಕಿನಲ್ಲಿ ಹೊಸ ಆಶಾವಾದ ಮೂಡಿಸಿದೆ. ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳು ಉದ್ಯೋಗಸೇರಿದಂತೆ ಹಲವು ವಲಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪೂರಕ ಸಹಯೋಗದಲ್ಲಿ ಮಹತ್ವಾಕಾಂಕ್ಷಿ ಬೆಳವಣಿಗೆ ಕಾಣಬಹುದು ಎಂದು ಹೇಳಿದರು.
ಬಿಜೆಪಿಯ ಜನಕಲ್ಯಾಣ ಕಾರ್ಯಕ್ರಮಗಳೇ ಗೆಲುವಿಗೆ ಸ್ಪೂರ್ತಿಯಾಗಿದ್ದು, ಜನರ ಬದುಕು ಸುಧಾರಣೆಯತ್ತ ಸಾಗುತ್ತಿದೆ. ಸಮೃದ್ಧ ಕರ್ನಾಟಕ ನಿರ್ಮಾಣಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ನಗರಪಾಲಿಕ ಸದಸ್ಯರಾದ ಎಂ ಸಿ ರಮೇಶ್, ಮಾಜಿನಗರ ಪಾಲಿಕಾ ಸದಸ್ಯರಾದ ರಮೇಶ್, ವೆಂಕಟೇಶ್ ದಾಸ್, ರವಿ, ಛಾಯಮ್ಮ, ನಾಗಣ್ಣ, ಲೋಕೇಶ್, ಚೆಲುವ, ಮಂಜುನಾಥ್ ಹಾಗೂ ಇನ್ನಿತರರು ಭಾಗಿಯಾಗಿದ್ದರು