ಮೈಸೂರು : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭಜರಂಗ ದಳ ನಿಷೇದ ಮಾಡ್ತೀವಿ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.
ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಸಾಫ್ಟ್ ಆಗಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ನಾನು ಆಂಜನೇಯನ ಭಕ್ತ, ಅಂಜನಾದ್ರಿ ಅಭಿವೃದ್ದಿ ಮಂಡಳಿ ಮಾಡ್ತೀವಿ ಎನ್ನುವ ಮೂಲಕ ಸಾಫ್ಟ್ ಆಗಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ಬ್ಯಾನ್ ವಿಚಾರ ಬರುತ್ತಿದ್ದಂತೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು, ಅಲ್ಲದೆ ಚುನಾವಣೆಯಲ್ಲಿ ಡ್ಯಾಮೇಜ್ ಆಗಬಹುದು ಎಂಬುದನ್ನು ಅರಿತ ಡಿಕೆ ಶಿವಕುಮಾರ್ ನಾನು ಹಿಂದೂ ನಾನು ಶಿವನ ಭಕ್ತ, ಆಂಜನೇಯನ ಭಕ್ತ ಯುವಕರಿಗೆ ಆಂಜನೇಯ ಕುರಿತು ಅರಿವು ಸಲುವಾಗಿ ಪ್ರತ್ಯೇಕ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದ್ದಾರೆ.