ಬನ್ನೂರು : ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಅಶ್ವಿನ್ ಕುಮಾರ್ ಪರವಾಗಿ ನಾಳೆ ಕುಮಾರಸ್ವಾಮಿ ಬನ್ನೂರು ಆಗಮಿಸಿ ಪ್ರಚಾರ ಸಭೆ ನಡೆಸಲಿದ್ದಾರೆ.
ನೆನ್ನೆ ಹೆಚ್.ಡಿ ದೇವೇಗೌಡರು ಪ್ರಚಾರ ಸಭೆ ನಡೆಸಿ ಕುಮಾರಸ್ವಾಮಿ ಸಿಎಂ ಆಗ್ತಾರೆ, ಅಶ್ವಿನ್ ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ನೀವು ಕುಮಾರಸ್ವಾಮಿಗೆ ಉಡುಗೊರೆ ನೀಡಬೇಕೆಂದು ದೇವೇಗೌಡರು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನಾಳೆ ಮತ್ತೆ ಕುಮಾರಸ್ವಾಮಿ ಆಗಮನದಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಹೆಚ್ಚಿನ ಶಕ್ತಿ ತುಂಬಲಿದೆ.
ಈಗಾಗಲೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಅಶ್ವಿನ್ ಅವರಿಗೆ ಎಲ್ಲಾ ಕಡೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಕುಮಾರಸ್ವಾಮಿ ಅವರ ಆಗಮನದಿಂದ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಲಿದ್ದು ಈ ಬಾರಿಯೂ ಅಶ್ವಿನ್ ಕುಮಾರ್ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.