ಗುಂಡ್ಲುಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜೆಎಸ್ಎಸ್ ಹಾಸ್ಟೆಲ್ನಲ್ಲಿ ಘಟನೆ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮೂಡಗೂರು ಗ್ರಾಮದ ನಿವಾಸಿಯಾಗಿದ್ದರು. ಚಾಮರಾಜನಗರ
ಜೆ ಎಸ್ ಎಸ್ ಪಿಯು ಕಾಲೇಜು ವಿದ್ಯಾರ್ಥಿನಿ ವಿಜಯಲಕ್ಷಿಮ (೧೮) ಮೃತ ಯುವತಿ. ವಿಜಯಲಕ್ಷಿಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು. ಫಲಿತಾಂಶ ಬರುತ್ತಿದ್ದಂತೆ ಅನುತ್ತೀರ್ಣಳಾಗಿರುವ ವಿಷಯ ಕೇಳಿ ಹಾಸ್ಟೆಲ್ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಜಯಲಕ್ಷಿಮ ಗುಂಡ್ಲುಪೇಟೆ ತಾಲೂಕಿನ ಮೂಡಗೂರು ಗ್ರಾಮದ ನಿವಾಸಿ, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಕೆಸಿಇಟಿಗಾಗಿ ತಯಾರಿ ನಡೆಸಲೆಂದು ಹಾಸ್ಟೆಲ್ನಲ್ಲಿ ವಾಸವಾಗಿದ್ದಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.