ಬಹುಭಾಷಾ ನಟಿ ಶ್ರೀಯಾ ಶರಣ್ಗೆ ಇದೀಗ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿ ನಟಿಸಿದ ಮೇಲೆ ಶ್ರೀಯಾ ಬಂಪರ್ ಆಫರ್ವೊಂದು ಸಿಕ್ಕಿದೆ. ಮೆಗಾಸ್ಟಾರ್ ಚಿರಂಜೀವಿ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಅದಕ್ಕೆ ದುಬಾರಿ ಸಂಭಾವನೆ ಕೂಡ ಶ್ರೀಯಾ ಡಿಮ್ಯಾಂಡ್ ಮಾಡಿದ್ದಾರೆ.
ಮದುವೆಯಾಗಿ ಮುದ್ದಾದ ಮಗಳಿದ್ರು ಕೂಡ ಶ್ರೀಯಾ ಶರಣ್ ಅವರು ತನ್ನ ಬ್ಯೂಟಿ ಮತ್ತು ಫಿಟ್ನೆಸ್ ಕಡೆ ತುಸು ಜಾಸ್ತಿ ಗಮನ ಕೊಡುತ್ತಾರೆ. ಸಂತೂರ್ ಮಮ್ಮಿ ಹಾಗೇ ಮಿಂಚೋ ಶ್ರೀಯಾ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ.
‘ಆರ್ಆರ್ಆರ್’, ‘ಕಬ್ಜ’ ಸಿನಿಮಾಗಳು ಭರ್ಜರಿ ಹಿಟ್ ಆದಮೇಲೆ ಕೇಳಬೇಕಾ? ತಮ್ಮ ಸಂಭಾವನೆ ಕೂಡ ಏರಿಸಿಕೊಂಡಿದ್ದಾರೆ. ಈ ನಡುವೆ ಮೆಗಾ ಸ್ಟಾರ್ ಚಿರಂಜೀವಿ ನಟನೆ ‘ಭೋಲಾ ಶಂಕರ್’ ಚಿತ್ರದಲ್ಲಿ ಸೊಂಟ ಬಳುಕಿಸಲು ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಕಬ್ಜ ನಟಿ 1 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಚಿತ್ರತಂಡದ ಕಡೆಯಿಂದ ಈ ಯಾವುದೇ ಅಪ್ಡೇಟ್ ಸಿಕ್ಕಿಲ್ಲ.
ಕತ್ರಿನಾ, ಕರೀನಾ, ಸಮಂತಾ ಇವರೆಲ್ಲರೂ ಸ್ಟಾರ್ ನಟಿಯಾಗಿದ್ರು ಕೂಡ. ಐಟಂ ಹಾಡಿಗೆ ಹೆಜ್ಜೆ ಹಾಕಿ, ಗೆದ್ದವರು. ಹಾಗಾಗಿ ಶ್ರೀಯಾ ಶರಣ್ ಕೂಡ ಇದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ವಿಭಿನ್ನ ಪ್ರಯತ್ನಕ್ಕೆ ಹೆಜ್ಜೆ ಇಟ್ಟಿದ್ದಾರೆ.