ನಂಜನಗೂಡು: ವರುಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ನಂಜನಗೂಡಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಹುಟ್ಟೂರು ಸಿದ್ದರಾಮಯ್ಯನ ಹುಂಡಿ ವರುಣ ಹೋಬಳಿಯಲ್ಲಿ ಬರುತ್ತೆ, ನಾನು ಮುಖ್ಯಮಂತ್ರಿಯಾಗಿದ್ದು ಇದೇ ವರುಣದಿಂದ ಈ ಬಾರಿಯೂ ವರುಣದಿಂದ ನಿಲ್ಲಬೇಕು ಎಂದು ಕಾರ್ಯಕರ್ತರ ಒತ್ತಡವಿತ್ತು ಕೊನೆಯ ಚುನಾವಣೆ ಇಲ್ಲಿಂದಲೇ ನಿಂತಿದ್ದೇನೆ ಎಂದರು.
ಕಳೆದ ಬಾರಿ ನನ್ನ ಮಗನನ್ನು 50 ಸಾವಿರ ಅಂತರದಲ್ಲಿ ಗೆಲ್ಲಿಸಿ ವಿಧಾನ ಸಭೆಗೆ ಕಳ್ಸಿದ್ರಿ, ಈ ಬಾರಿ ನನ್ನನ್ನೂ 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಅಲ್ಲದೆ ವರುಣ ಅಭಿವೃದ್ಧಿಗೆ ಈಗಾಗಲೇ ಅನೇಕ ಯೋಜನೆಗಳನ್ನು ರೂಪಿಸಿದ್ದೇವೆ ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಟಾನಕ್ಕೆ ತರಬೇಕು ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಸಮಾವೇಶ ಮುಗಿಸಿ ನಾಮ ಪತ್ರ ಸಲ್ಲಿಸಿದ ಸಿದ್ದರಾಮಯ್ಯಗೆ ಜೊತೆಗೆ ಮೊಮ್ಮಗ ಧವನ್ ರಾಕೇಶ್ ಮಾಜಿ ಸಚಿವ ಮಹದೇವಪ್ಪ, ದರ್ಶನ್ ದ್ರುವ ನಾರಾಯಣ್, ಪುಟ್ಟರಂಗ ಶೆಟ್ಟಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು