– ವರುಣದಲ್ಲಿ ಸಿದ್ದರಾಮಯ್ಯ vs ಸೋಮಣ್ಣ ಕದನ
– ಸಿದ್ದು ವಿರುದ್ಧ ಬೊಮ್ಮಾಯಿ ಘರ್ಜನೆ
ನಂಜನಗೂಡು : ವರುಣ ವಿಧಾನ ಸಭೆ ಕ್ಷೇತ್ರಕ್ಕೆ ಸಚಿವ ವಿ.ಸೋಮಣ್ಣ ಇಂದು ನಾಮಪತ್ರ ಸಲ್ಲಿಸಿದ್ದರು, ಸೋಮಣ್ಣ ಸಿಎಂ ಬಸವರಾಜ್ ಬೊಮ್ಮಾಯಿ ಸಂಸದ ಪ್ರತಾಪ್ ಸಿಂಹ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಅನೇಕರು ಸಾಥ್ ನೀಡಿದರು
ಸೋಮಣ್ಣ ಎಂಟ್ರಿಯಿಂದ ವರುಣ ಕಣ ಕದನ ಕಣವಾಗಿ ಮಾರ್ಪಟ್ಟಿದೆ, ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಬಿಜೆಪಿ ಹಿರಿಯ ಹಾಗೂ ಬಿಜೆಪಿ ಲಿಂಗಾಯತ ನಾಯಕ ಸೋಮಣ್ಣರನ್ನು ಕಣಕ್ಕಿಳಿಸಿದೆ.