– ನಿಜವಾಗುತ್ತ ಕುಮಾರಸ್ವಾಮಿ ಭವಿಷ್ಯ
– ಬ್ರಾಹ್ಮಣ ಸಿಎಂ ಮಾಡಲು ಬಿಜೆಪಿಯಲ್ಲಿ ಹುನ್ನಾರ ಎಂದಿದ್ದ ಹೆಚ್.ಡಿ.ಕೆ
– ಶೆಟ್ಟರ್ ರಾಜೀನಾಮೆ ಬಳಿಕ ಮತ್ತಷ್ಟು ಪುಷ್ಟಿ?
ಮೈಸೂರು: ಬ್ರಾಹ್ಮಣ ಸಿಎಂ ಮಾಡಲು ಈಗಾಗಲೇ ಬಿಜೆಪಿಯಲ್ಲಿ ಸಿದ್ಧತೆ ನಡೆದಿದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಹಿರಿಯ ನಾಯಕರು ಈಗಾಗಲೇ ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದಾರೆ, ಇಂದು ಜಗದೀಶ್ ಶೆಟ್ಟರ್ ಕೂಡ ಸ್ಪೀಕರ್ ಬೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಬಿಜೆಪಿಯಲ್ಲಿ ಲಿಂಗಾಯತ ನಾಯಕರ ವಿರುದ್ದ ನಿಜವಾಗಿಯೂ ಹುನ್ನಾರ ನಡೆಯುತಿದ್ಯಾ ಎಂಬ ಅನುಮಾನ ಮೂಡಿದೆ.
ಒಂದು ಕಡೆ ಲಿಂಗಾಯತ ನಾಯಕ ವಿ.ಸೋಮಣ್ಣರಿಗೆ ಸ್ವ ಕ್ಷೇತ್ರ ತಪ್ಪಿಸಿ ಎರಡು ಹೊಸ ಕ್ಷೇತ್ರಗಳನ್ನು ಬಿಜೆಪಿ ನೀಡಿದೆ. ಸಿದ್ದರಾಮಯ್ಯ ವಿರುದ್ಧ ಸೋಮಣ್ಣರನ್ನ ಕಣಕ್ಕೆ ಇಳಿಸಿರುವುದು ಅನೇಕ ಅನುಮಾನ ಹುಟ್ಟಾಕಿದೆ. ಅಲ್ಲದೆ ಸಿಎಂ ಸ್ಥಾನಕ್ಕೆ ಮುಂಚಿನ ಸಾಲಿನಲ್ಲಿದ್ದ ಲಿಂಗಾಯತ ನಾಯಕರು ಇದೀಗ ಅಡ್ಡ ಕತ್ತರಿಯಲ್ಲಿ ಸಿಲುಕಿದ್ದಾರೆ ಎಂಬ ಮಾತುಗಳು ಸಹ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ನೆನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಗದೀಶ್ ಶೆಟ್ಟರ್ ಕೆಲವರು ಸ್ವಹಿತಾಸಕ್ತಿಗೆ ಬಿಜೆಪಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಅ ಕೆಲ ನಾಯಕರ ಹೆಸರನ್ನು ಬಹಿರಂಗ ಪಡಿಸುತ್ತೇನೆ ಎಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.